ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಕಡಿಮೆ ತೂಕದ ಕ್ಷಿಪಣಿ ಪ್ರಯೋಗವನ್ನು ಮ್ಯಾನ್-ಪೋರ್ಟಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ (ಎಂಪಿಎಟಿಜಿಎಂ) ಮೂಲಕ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಹೊಸ ತಲೆಮಾರಿನ ಆಕಾಶ್ ಕ್ಷಿಪಣಿ (ಆಕಾಶ್-ಎನ್‌ಜಿ)ಯೊಂದಿಗೆ ಇದನ್ನು ಸಂಯೋಜನೆ ಮಾಡಿ ಪರೀಕ್ಷೆ ನಡೆಸಲಾಯಿತು.
ಡಿಆರ್‌ಡಿಒನಿಂದ ಆಕಾಶ್-ಎನ್‌ಜಿ, ಎಂಪಿ-ಎಟಿಜಿಎಂ ಕ್ಷಿಪಣಿ ಪರೀಕ್ಷೆ ಯಶಸ್ವಿ - ಮ್ಯಾನ್-ಪೋರ್ಟಬಲ್ ಆಂಟಿ-ಟ್ಯಾಂಕ್
ಮ್ಯಾನ್-ಪೋರ್ಟಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಅತಿ ಹಗುರವಾರ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿತ್ತು.
ಡಿಆರ್‌ಡಿಒನಿಂದ ಆಕಾಶ್-ಎನ್‌ಜಿ, ಎಂಪಿ-ಎಟಿಜಿಎಂ ಕ್ಷಿಪಣಿ ಪರೀಕ್ಷೆ ಯಶಸ್ವಿ
ಮ್ಯಾನ್-ಪೋರ್ಟಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಯನ್ನು ಥರ್ಮಲ್ ಸೈಟ್‌ನೊಂದಿಗೆ ಸಂಯೋಜಿಸಲಾದ ಮ್ಯಾನ್-ಪೋರ್ಟಬಲ್ ಉಡಾವಣೆ ವಾಹಕದಿಂದ ಪರೀಕ್ಷೆ ನಡೆಸಲಾಗಿದೆ. ಕ್ಷಿಪಣಿ ನೇರ ದಾಳಿಯಲ್ಲಿ ತನ್ನ ಗುರಿಮುಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.