ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿರ್ದೇಶನದಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಉತ್ತರ ಪ್ರದೇಶ ಸರ್ಕಾರಕ್ಕೆ 5,000 ಲೀಟರ್ ಸಾಮರ್ಥ್ಯದ ವೈದ್ಯಕೀಯ ಆಮ್ಲಜನಕವಾದ ಜಂಬೋ ಸಿಲಿಂಡರ್‌ಗಳನ್ನು ಸೋಮವಾರ ಪೂರೈಸಿದೆ.
ಉತ್ತರ ಪ್ರದೇಶಕ್ಕೆ ಜಂಬೊ ಆಮ್ಲಜನಕ ಸಿಲಿಂಡರ್ ಪೂರೈಸಿದ ಡಿಆರ್‌ಡಿಒ - ಆಮ್ಲಜನಕ ಸಿಲಿಂಡರ್ ಪೂರೈಸಿದ ಡಿಆರ್‌ಡಿಒ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದಾದ ನಂತರ ಅಲ್ಲಿನ ಕೊರೊನಾ ನಿಯಂತ್ರಣ ಪರಿಸ್ಥಿತಿ ಕೈ ಮೀರಿ ಹೋಗಿದೆ.
ಹೆಚ್ಚುವರಿ 1,000 ಸಿಲಿಂಡರ್‌ಗಳನ್ನು ಡಿಆರ್‌ಡಿಒ ಕೆಲ ದಿನಗಳ ನಂತರ ಒದಗಿಸಲಿದೆ. ಇನ್ನು ಈ ಆಮ್ಲಜನಕವನ್ನ ಲಖನೌದಲ್ಲಿನ ಕೊರೊನಾ ರೋಗಿಗಳಿಗೆ ಪೂರೈಸಲಾಗುವುದು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಹಾಗೆ ಉತ್ತರ ಪ್ರದೇಶದ ಕೊರೊನಾ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಎಲ್ಲ ಕಾರಣಕ್ಕೆ ಮೇ 15 ರವರೆಗೆ ಎಲ್ಲಾ ಭಾನುವಾರದಂದು ರಾಜ್ಯಾದ್ಯಂತ ಲಾಕ್ಡೌನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಣೆ ಹೊರಡಿಸಿದೆ. ಈ ಹಿನ್ನೆಲೆ ಉತ್ತರ ಪ್ರದೇಶದ ಎಲ್ಲ ಜಿಲ್ಲೆಗಳು ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆ ಲಾಕ್ ಡೌನ್ ಇರಲಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಉತ್ತರ ಪ್ರದೇಶದಲ್ಲಿ ಪ್ರಸ್ತುತ ಒಟ್ಟು 1,91,457 ಸಕ್ರಿಯ ಕೊರೊನಾ ಪ್ರಕರಣಗಳಿವೆ.