ಕರ್ನಾಟಕ

karnataka

ETV Bharat / bharat

ಸೈನಿಕರಿಗಾಗಿ ಆಹಾರ ಟಾನಿಕ್ ಅಭಿವೃದ್ಧಿಪಡಿಸಿದ ಡಿಆರ್‌ಡಿಒ: 2 ಡೋಸ್‌ ತೆಗೆದುಕೊಂಡರೆ ಮೂರ್ನಾಲ್ಕು ದಿನ ಹಸಿವೇ ಆಗಲ್ಲ! - ಆಹಾರ ಟಾನಿಕ್ ಅಭಿವೃದ್ಧಿ

ಗಾಂಧಿನಗರದಲ್ಲಿ ನಡೆದ ಡಿಫೆನ್ಸ್ ಎಕ್ಸ್‌ಪೋ 2022 ರಲ್ಲಿ ಡಿಆರ್‌ಡಿಒ ವಿನೂತನ ಆಹಾರವೊಂದನ್ನ ಆವಿಷ್ಕಾರ ಮಾಡಿದೆ. ಭಾರತದ ಉತ್ತರ ಗಡಿಯ ಶೀತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಸೈನಿಕರಿಗೆ ವಿಶೇಷ ಆಹಾರವನ್ನ ಸಿದ್ಧಪಡಿಸಲಾಗಿದೆ. ಇದು ಸೈನಿಕರ ಹಸಿವಿನ ಜೊತೆಗೆ ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಡಿಆರ್​ಡಿಒ ಹೇಳಿದೆ.

ಆಹಾರ ಟಾನಿಕ್
food tonic

By

Published : Oct 21, 2022, 1:05 PM IST

ಗಾಂಧಿನಗರ/ಗುಜರಾತ್​:ದೇಶವನ್ನ ರಕ್ಷಿಸಲು ಭಾರತೀಯ ಸೈನಿಕರು ಚಳಿಯಲ್ಲಿ ತಿಂಗಳುಗಟ್ಟಲೇ ಕಾಲ ಕಳೆಯುವ ಮೂಲಕ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾರೆ. ಹವಾಮಾನ ಏರಿಳಿತದ ಜೊತೆಗೆ ಆಹಾರದ ಕೊರತೆ ಸಹ ಕಾಡುತ್ತಿರುತ್ತದೆ. ಈ ವೇಳೆ ಜವಾನರು ಹಲವಾರು ಕಾಯಿಲೆಗಳೊಂದಿಗೆ ಹೋರಾಡುವುದುಂಟು.

ಹಾಗಾಗಿ, ನಮ್ಮ ಹೆಮ್ಮೆಯ ಸೈನಿಕರಿಗಾಗಿ ಡಿಆರ್​ಡಿಒ ವಿಜ್ಞಾನಿಗಳ ತಂಡವು ಆಹಾರ ಟಾನಿಕ್ ಅನ್ನು ಅಭಿವೃದ್ಧಿಪಡಿಸಿದೆ. ಕೇವಲ ಒಂದು ಅಥವಾ ಎರಡು ಡೋಸ್‌ ತೆಗೆದುಕೊಂಡರೆ ಇದು ಮೂರ್ನಾಲ್ಕು ದಿನಗಳವರೆಗೆ ಹಸಿವಿನಿಂದ ಬಳಲುವುದನ್ನು ತಡೆಯುತ್ತದೆ.

ಗಾಂಧಿನಗರದಲ್ಲಿ ನಡೆದ ಡಿಫೆನ್ಸ್ ಎಕ್ಸ್‌ಪೋ 2022 ರಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಡಿಆರ್‌ಡಿಒ ವಿಜ್ಞಾನಿ ಮನೋಜ್ ಪಟೇಲ್, " ನಮ್ಮ ಯೋಧರು ಚೀನಾ, ಲೇಹ್, ಲಡಾಕ್ ಮತ್ತು ಕಾಶ್ಮೀರ ಗಡಿಯಲ್ಲಿ ದೇಶವನ್ನ ಕಾಯುವಾಗ ಹಿಮ ಮತ್ತು ಚಳಿಯಿಂದಾಗಿ ಅನೇಕ ಸಮಸ್ಯೆ ಎದುರಿಸುತ್ತಿರುತ್ತಾರೆ. ಸೇನೆಯ ಈ ಸಮಸ್ಯೆಯನ್ನು DRDO ಪರಿಗಣಿಸಿ ಎಚ್ಚರಿಕೆಯಿಂದ ಅಧ್ಯಯನ ಮಾಡಿ, ಈ ಟಾನಿಕ್ ಅನ್ನು ಕಂಡು ಹಿಡಿದಿದೆ. ಜೊತೆಗೆ, ಗಿಡಮೂಲಿಕೆ ಚಹಾ ಮತ್ತು ಜ್ಯೂಸ್‌ ತಯಾರಿಸಲಾಗುತ್ತದೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಯುದ್ಧಭೂಮಿ ಸಿಯಾಚಿನ್​ನಲ್ಲಿ ತ್ರಿವರ್ಣ ಹಾರಿಸಿದ ಸೈನಿಕರು

'ಉತ್ಪಾದಿಸಲಾದ ಟಾನಿಕ್ ಪ್ರತಿಯೊಬ್ಬರ ದೇಹದ ಉಷ್ಣತೆಯನ್ನು ಸ್ಥಿರವಾಗಿಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಂಜುಗಡ್ಡೆಯಿಂದಲೇ ಕೂಡಿದ ಸ್ಥಳದಲ್ಲಿ ಹೋಗಲು ಒತ್ತಾಯಿಸಿದಾಗ, ಜವಾನರ ಮೇಲೆ ಪರಿಣಾಮ ಬೀರುತ್ತಿದ್ದ ಮೆಮೊರಿ ಲಾಸ್​ ಮತ್ತು ಬಿಪಿಯಂತಹ ಸಮಸ್ಯೆಗಳು, ಈ ಟಾನಿಕ್​​​ನಿಂದ ಕಂಡುಬರುವುದಿಲ್ಲ. ಈ ಟಾನಿಕ್ ತೆಗೆದುಕೊಳ್ಳುವವರು ಮೂರು, ಏಳು ಅಥವಾ ಹದಿನೈದು ದಿನಗಳವರೆಗೆ ಹಸಿವನ್ನು ಅನುಭವಿಸುವುದಿಲ್ಲ. ಈ ಟಾನಿಕ್‌ನಿಂದ ದೇಹವು ನಿಯಮಿತವಾಗಿ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯುತ್ತದೆ' ಎಂದು ಪಟೇಲ್​​ ಹೇಳಿದರು.

ಇದನ್ನೂ ಓದಿ:ನೋಡಿ: 15,000 ಅಡಿ ಎತ್ತರದ ಹಿಮಾವೃತ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯಿಂದ ಗಸ್ತು

ರಷ್ಯಾದ ಸೈನ್ಯ ಮತ್ತು ಚೀನಾದ ಸೈನ್ಯವು ಈಗಾಗಲೇ ಕೆಂಪು ಬಣ್ಣದ ಟಾನಿಕ್ ಅನ್ನು ಬಳಸುತ್ತಿದೆ. ಭಾರತೀಯ ಸೈನಿಕರು ಕೂಡ ಶೀಘ್ರದಲ್ಲೇ ಇದನ್ನು ಬಳಸಿಕೊಳ್ಳುತ್ತಾರೆ. ಈ ಟಾನಿಕ್ ಅನ್ನು ಆಯುರ್ವೇದ ವಿಧಾನದಲ್ಲಿ ರಚಿಸಲಾಗಿದೆ ಎಂದು ಮನೋಜ್ ಪಟೇಲ್ ವಿವರಣೆ ಕೊಟ್ಟರು

ಇದನ್ನೂ ಓದಿ:5 ಅಡಿ ಹಿಮದ ಮಧ್ಯೆ ನಡೆದು ಗಸ್ತು ತಿರುಗುತ್ತಿರುವ ವೀರಯೋಧರು

ABOUT THE AUTHOR

...view details