ನವದೆಹಲಿ :ತಪಸ್ ಮತ್ತು ಸ್ವಿಫ್ಟ್ ಯುಎವಿಗಳ ರಿಟ್ರ್ಯಾಕೇಬಲ್ ಲ್ಯಾಂಡಿಂಗ್ ಗೇರ್ ಸಿಸ್ಟಮ್ಸ್ ಮತ್ತು ಪಿ -75 ಜಲಾಂತರ್ಗಾಮಿ ನೌಕೆಯ 18 ಬಗೆಯ ಫಿಲ್ಟರ್‌ಗಳನ್ನು ಹಸ್ತಾಂತರಿಸುವ ಸಮಾರಂಭವು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯೋಗಾಲಯ, ಯುದ್ಧ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ಸಿವಿಆರ್‌ಡಿಇ) ಸಮ್ಮುಖದಲ್ಲಿ ಚೆನ್ನೈನಲ್ಲಿ ಭಾನುವಾರ ನಡೆಯಿತು.
ಡಿಎಂಕೆ ಮುಖಂಡ ಡಾ. ಕಲಾನಿಧಿ ವೀರಸ್ವಾಮಿ, ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿ ಸದಸ್ಯ ಡಾ.ಡಿ.ಸತೀಶ್ ರೆಡ್ಡಿ, ಡಿಡಿಆರ್&ಡಿ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷರಾದ ಪಿ.ಕೆ. ಮೆಹ್ತಾ, ಮತ್ತು ಡಿಜಿ (ಎಸಿಇ) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಿವಿಆರ್‌ಡಿಇ ತಪಸ್ ಯುಎವಿಗಾಗಿ ಸ್ಥಳೀಯವಾಗಿ ರಿಟ್ರ್ಯಾಕೇಬಲ್ ಲ್ಯಾಂಡಿಂಗ್ ಗೇರ್ (ಆರ್‌ಎಲ್‌ಜಿ) ವ್ಯವಸ್ಥೆಗಳನ್ನು ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲಾಗಿದೆ. ಆರ್‌ಎಲ್‌ಜಿ ಮೂರು ಟನ್‌ಗಳಷ್ಟು ಹೊರೆ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಟ್ರೈಸಿಕಲ್, ಹೈಡ್ರೊ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ನನ್ನು ಈಗ ಕೊಯಮತ್ತೂರಿನಲ್ಲಿರುವ ಒಂದು ಉದ್ಯಮವು ತಯಾರಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.