ಬಾಲಸೋರ್ :ನಿನ್ನೆ ಒಡಿಶಾದ ಬಾಲಸೋರ್ ಕರಾವಳಿಯಲ್ಲಿ ಡಿಆರ್ಡಿಒ ಅಭಿವೃದ್ಧಿ ಪಡಿಸಿದ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಪರೀಕ್ಷೆ ನಡೆಯಿತು.
ಡಿಆರ್ಡಿಒ ಅಭಿವೃದ್ಧಿ ಪಡಿಸಿದ ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಕ್ಷಿಪಣಿ ಯಶಸ್ವಿ ಪರೀಕ್ಷೆ - DRDO developed Quick Reaction Surface to Air Missile
ಚಲಿಸುವ ಶತ್ರು ವಿಮಾನ ಅಥವಾ ಗುರಿಯನ್ನು ಪತ್ತೆ ಹಚ್ಚಿ, ಹೊಡೆದುರುಳಿಸುವ ಸಲುವಾಗಿ ಕ್ಯೂಆರ್‌ಎಸ್‌ಎಎಂ ಕ್ಷಿಪಣಿಯನ್ನು ಡಿಆರ್ಡಿಒ ಅಭಿವೃದ್ಧಿ ಪಡಿಸಿದೆ..
ಕ್ಷಿಪಣಿ 25-30 ಕಿ.ಮೀ ಸ್ಟ್ರೈಕ್ ವ್ಯಾಪ್ತಿಯ ಗಾಳಿಯಲ್ಲಿ ಗುರಿಗಳನ್ನು ಹೊಡೆಯಬಲ್ಲದು. ಟೆಸ್ಟ್ ಫೈರಿಂಗ್ ಸಮಯದಲ್ಲಿ, ಅದು ನೇರವಾಗಿ ತನ್ನ ಗುರಿ ಮುಟ್ಟಿದೆ. ಒಡಿಶಾದ ಚಂಡಿಪುರ್ನಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಲ್ಲಿ ಪರೀಕ್ಷೆ ನಡೆಸಲಾಗಿದ್ದು, ಕ್ಷಿಪಣಿ ನೇರವಾಗಿ ತನ್ನ ಗುರಿಯನ್ನು ಮುಟ್ಟಿದೆ.
ಪೈಲೆಟ್ ರಹಿತ ವಿಮಾನವನ್ನು ಮಧ್ಯಮ ವ್ಯಾಪ್ತಿಯಲ್ಲಿ ಕರಾರುವಕ್ಕಾಗಿ ಹೊಡೆದುರುಳಿಸಿದೆ ಎಂದು ರಕ್ಷಣಾ ಸಂಶೋಧಣೆ ಮತ್ತು ಅಭಿವೃದ್ಧಿ ಸಂಸ್ಥೆ( ಡಿಆರ್ಡಿಒ) ತಿಳಿಸಿದೆ. ಚಲಿಸುವ ಶತ್ರು ವಿಮಾನ ಅಥವಾ ಗುರಿಯನ್ನು ಪತ್ತೆ ಹಚ್ಚಿ, ಹೊಡೆದುರುಳಿಸುವ ಸಲುವಾಗಿ ಕ್ಯೂಆರ್‌ಎಸ್‌ಎಎಂ ಕ್ಷಿಪಣಿಯನ್ನು ಡಿಆರ್ಡಿಒ ಅಭಿವೃದ್ಧಿ ಪಡಿಸಿದೆ. ಮೊಬೈಲ್ ಲಾಂಚರ್ ಬಳಸಿ ಈ ಕ್ಷಿಪಣಿಯನ್ನು ಉಡಾಯಿಸಬಹುದು.