ನವದೆಹಲಿ:ನಾವು ಭಾರತವನ್ನು ಮಹಾಶಕ್ತಿಯನ್ನಾಗಿ ಮಾಡಲು ಬಯಸುತ್ತೇವೆ ಮತ್ತು ಈ ಪ್ರಯತ್ನದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಪಾತ್ರ ಮುಖ್ಯವಾಗಿರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಡಿಆರ್‌ಡಿಒ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ಮಲ್ಟಿರೋಲ್ ಫೈಟರ್ ಏರ್‌ಕ್ರಾಫ್ಟ್ ತೇಜಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಗಳು ಸೇರಿದಂತೆ ಹಲವು ಯಶಸ್ವಿ ರಕ್ಷಣಾ ವ್ಯವಸ್ಥೆಗಳನ್ನು ಡಿಆರ್‌ಡಿಒ ಪರೀಕ್ಷಿಸಿದೆ. ಇದು ದೇಶದ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಿದೆ. "ನಾವು ಭಾರತವನ್ನು ಮಹಾಶಕ್ತಿಯನ್ನಾಗಿ ಮಾಡಲು ಬಯಸುತ್ತೇವೆ ಮತ್ತು ನೀವು (ವಿಜ್ಞಾನಿಗಳು) ಇದರಲ್ಲಿ ಪ್ರಮುಖ ಪಾತ್ರವಹಿಸಬೇಕು" ಎಂದರು.