ತಿರುಪತಿ-ತಿರುಮಲ(ಆಂಧ್ರಪ್ರದೇಶ) :ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರುಮಲದಲ್ಲಿರುವ ವೆಂಕಟೇಶ್ವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಇದಕ್ಕೂ ಮುನ್ನ ಸಾಂಪ್ರದಾಯಿಕ ಉಡುಗೆ ಧರಿಸಿದ ರಾಷ್ಟ್ರಪತಿಗಳು ಶ್ರೀ ಲಕ್ಷ್ಮೀ ವರಾಹಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಂಗನಾಯಕುಲ ಮಂಟಪದಲ್ಲಿ ಆರ್ಚಕರು ವೇದ ಸ್ತೋತ್ರಗಳ ವೇದಾಶೀರ್ವಾದವನ್ನು ರಾಷ್ಟ್ರಪತಿಯವರಿಗೆ ಪಠಿಸಲಾಯಿತು.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ದ್ರೌಪದಿ ಮುರ್ಮು - ಮುರ್ಮು ಶ್ರೀ ಪದ್ಮಾವತಿ ಅತಿಥಿಗೃಹದಲ್ಲಿ ತಂಗಿದ್ದರು
ದೇಶದ ರಾಷ್ಟ್ರಪತಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ದೇಶದ ಪ್ರಥಮ ಪ್ರಜೆ ಆಗಿರುವ ದ್ರೌಪದಿ ಮುರ್ಮು ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ದ್ರೌಪದಿ ಮುರ್ಮು
ದೇಶದ ರಾಷ್ಟ್ರಪತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ರಾಷ್ಟ್ರಪತಿ ಮುರ್ಮು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದರು. ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಹಾಗೂ ಹೆಚ್ಚುವರಿ ಕಾರ್ಯನಿರ್ವಹಣಾಧಿಕಾರಿ ಎ ವೆಂಕಟ ಧರ್ಮ ರೆಡ್ಡಿ ಅವರು ಶ್ರೀಗಳ ಭಾವಚಿತ್ರ ಮತ್ತು ಪ್ರಸಾದವನ್ನು ರಾಷ್ಟ್ರಪತಿಗೆ ನೀಡಿ ಗೌರವಿಸಿದರು. ಭಾನುವಾರ ರಾತ್ರಿ ಆಗಮಿಸಿದ ಮುರ್ಮು ಶ್ರೀ ಪದ್ಮಾವತಿ ಅತಿಥಿಗೃಹದಲ್ಲಿ ತಂಗಿದ್ದರು.
ಇದನ್ನೂ ಓದಿ:ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು