ರಾಂಚಿ (ಜಾರ್ಖಂಡ್):ಮೇವು ಹಗರಣ ಪ್ರಕರಣದ ದೋಷಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮೂತ್ರಪಿಂಡ ಸಮಸ್ಯೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಕಿಡ್ನಿಗಳು ಯಾವಾಗ ಬೇಕಾದರೂ ಹಾಳಾಗಬಹುದು: ವೈದ್ಯ ಉಮೇಶ್ - ಮೇವು ಹಗರಣ ಪ್ರಕರಣದ ದೋಷಿ ಲಾಲೂ ಪ್ರಸಾದ್ ಯಾದವ್
18:09 December 12
ವೈದ್ಯರಿಂದ ಆಘಾತಕಾರಿ ಮಾಹಿತಿ ಬಿಡುಗಡೆ
ಲಾಲು ಪ್ರಸಾದ್ ಯಾದವ್ ಅವರ ಮೂತ್ರಪಿಂಡಗಳು ಶೇ.25ರಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಹದಗೆಡಬಹುದು. ಹೀಗಾಗಿ, ಅವರ ಆರೋಗ್ಯ ತೀವ್ರ ಗಂಭೀರವಾಗಿದೆ ಎಂದು ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಆರ್‌ಜೆಡಿ ಮುಖ್ಯಸ್ಥರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಉಮೇಶ್ ಪ್ರಸಾದ್ ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರ ಕಿಡ್ನಿಗಳು ಶೇ.75ರಷ್ಟು ಹಾಳಾಗಿದ್ದು, ಸದ್ಯ ಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಅವರ ಕಿಡ್ನಿಗಳ ಕಾರ್ಯ ಯಾವಾಗ ಬೇಕಾದರೂ ನಿಂತು ಹೋಗಬಹುದು. ಇಂತಹ ಪರಿಸ್ಥಿತಿಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಅಗತ್ಯವಿದೆ. ಇದು ಆತಂಕಕಾರಿ ಎಂದು ಈ ಕುರಿತ ವರದಿಯನ್ನು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಲಾಲು ಪ್ರಸಾದ್ ಅವರು ಮಧುಮೇಹ, ರಕ್ತದೊತ್ತಡ, ಮತ್ತು ಇತರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 71ರ ಹರೆಯದ ಅವರು, ಮೇವು ಹಗರಣಕ್ಕೆ ಸಂಬಂಧಿಸಿದಂತೆ 2017ರಿಂದಲೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಮೇವು ಹಗರಣ ಪ್ರಕರಣದಲ್ಲಿ ಲಾಲು ಅವರ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಆರ್‌ಜೆಡಿ ಮುಖ್ಯಸ್ಥರ ವಕೀಲರ ಕೋರಿಕೆಯ ನಂತರ ಆರು ವಾರಗಳವರೆಗೆ ಮುಂದೂಡಿದ ನಂತರ ಈ ಬೆಳವಣಿಗೆ ಸಂಭವಿಸಿದೆ.