ಕರ್ನಾಟಕ

karnataka

ETV Bharat / bharat

ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ಅಧಿಕಾರ ಸ್ವೀಕಾರ.. ಮೊದಲ ದಿನವೇ ಭರ್ಜರಿ ಕಾರ್ಯಾರಂಭ

ದೆಹಲಿಯ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

dr-srinivas-to-push-new-initiatives-as-aiims-director
ದೆಹಲಿಯ ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಶ್ರೀನಿವಾಸ್ ಅಧಿಕಾರ ಸ್ವೀಕಾರ

By

Published : Sep 24, 2022, 10:55 PM IST

ನವದೆಹಲಿ : ದೆಹಲಿಯ ಏಮ್ಸ್‌ನ ಹೊಸ ನಿರ್ದೇಶಕರಾಗಿ ಡಾ ಎಂ ಶ್ರೀನಿವಾಸ್ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಹೈದರಾಬಾದ್‌ನ ಇಎಸ್‌ಐಸಿ ಆಸ್ಪತ್ರೆಯಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಡೀನ್​ ಆಗಿ ಮತ್ತು ವೈದ್ಯರಾಗಿ ಹಲವು ಸಾಧನೆ ಮಾಡಿದ್ದಾರೆ.

ಹೈದರಾಬಾದ್‌ನ ESIC ಆಸ್ಪತ್ರೆಯಲ್ಲಿ ತಮ್ಮ ಅಧಿಕಾರಾವಧಿಯಲ್ಲಿ, ಡಾ ಶ್ರೀನಿವಾಸ್ ಅವರು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸುವುದನ್ನು ಗಣನೀಯವಾಗಿ ಕಡಿಮೆ ಮಾಡಿದ್ದರು. ಇವರು ಕಾರ್ಡಿಯಾಕ್ ಕ್ಯಾಥ್ ಲ್ಯಾಬ್ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ಮತ್ತು ರೇಡಿಯೊಥೆರಪಿ ಉಪಕರಣಗಳು ಸೇರಿದಂತೆ ಅಲ್ಲಿ ಲಭ್ಯವಿಲ್ಲದ ಚಿಕಿತ್ಸೆಗೆ ಮಾತ್ರ ಖಾಸಗಿ ಆಸ್ಪತ್ರೆಗೆ ಸೂಚಿಸುತ್ತಿದ್ದರು.

ದೆಹಲಿಯ ಏಮ್ಸ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನ, ಡಾ ಶ್ರೀನಿವಾಸ್​ ಅವರು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ವೀಕ್ಷಣೆ ಮಾಡಿ, ಅಲ್ಲಿನ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. ಇವರ ಸರಳತೆ ಇಲ್ಲಿನ ಸಿಬ್ಬಂದಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಏಮ್ಸ್ ನಿರ್ದೇಶಕ ಹುದ್ದೆಗೆ ಕನ್ನಡಿಗ ನೇಮಕ: ಯಾದಗಿರಿಯ ನಿವಾಸಿಯಾಗಿದ್ದ ದಿವಂಗತ ಆಶಪ್ಪ ಅವರ ಹಿರಿಯ ಪುತ್ರರಾಗಿರುವ ಡಾ. ಎಂ. ಶ್ರೀನಿವಾಸ್ ಅವರು ದೇಶದ ಪ್ರತಿಷ್ಠಿತ ಏಮ್ಸ್​ ನಿರ್ದೇಶಕರಾಗಿ ನೇಮಕವಾಗಿರುವುದು ಯಾದಗಿರಿ ವೈದ್ಯ ಸಮೂಹ ಮತ್ತು ಜನರಿಗೆ ಸಂತಸ ಹಾಗೂ ಹೆಮ್ಮೆ ಮೂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಮೀಟಿಯು ಸೆ.9 ರಂದು ಈ ಆದೇಶ ಹೊರಡಿಸಿದೆ. ಇದಕ್ಕೂ ಮುಂಚೆ ಇದ್ದ ಡಾ. ರಣದೀಪ್ ಗುಲೇರಿಯಾ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ, ಮುಂದಿನ 5 ವರ್ಷದವರೆಗೆ ಅಥವಾ 65 ವರ್ಷ ವಯೋಮಿತಿ ವರೆಗೆ ಇದನ್ನು ಮುಂದುವರೆಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಈ ಹಿಂದೆ ನಿರ್ದೇಶಕರಾಗಿದ್ದ ಡಾ. ರಣದೀಪ್ ಗುಲೇರಿಯಾ (Dr Randeep Guleria) ಅವರನ್ನು 2017 ಮಾರ್ಚ್ 28ರಂದು ಏಮ್ಸ್ ನಿರ್ದೇಶಕರಾಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಅಧಿಕಾರ ಅವಧಿ ಮುಗಿದ ನಂತರ ಎರಡು ಬಾರಿ ತಲಾ ಮೂರು ತಿಂಗಳಂತೆ ಅವಧಿ ವಿಸ್ತರಿಸಲಾಗಿತ್ತು. ಇವರ ಅಧಿಕಾರಿ ಶುಕ್ರವಾರ ಅಂತ್ಯವಾಗಲಿದ್ದು, ಡಾ.ಶ್ರೀನಿವಾಸ್ ಮುಂದಿನ ಐದು ವರ್ಷ ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ :ದೆಹಲಿಯ ಏಮ್ಸ್ ನಿರ್ದೇಶಕ ಸ್ಥಾನಕ್ಕೆ ಕನ್ನಡಿಗ ನೇಮಕ: ಕೇಂದ್ರದಿಂದ ಆದೇಶ

ABOUT THE AUTHOR

...view details