ಪಾಟ್ನಾ(ಬಿಹಾರ್): ಸ್ತ್ರೀ ರೋಗ ತಜ್ಞರು ಪುರುಷನಾಗಿದ್ದರೆ, ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಯುಷ್ಮಾನ್ ಖುರಾನಾ ಅವರ 'ಡಾಕ್ಟರ್ ಜಿ' ಚಿತ್ರವು ಈ ವಿಷಯವನ್ನು ತಮಾಷೆಯ ರೀತಿಯಲ್ಲಿ ತಂದಿದೆ. ಆದರೆ ನಿಜವಾದ ಪರಿಸ್ಥಿತಿ ಏನು?, ಇವರು ಮಹಿಳೆಯರ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಾಗ ಎಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ? ಎಂಬುದರ ಬಗ್ಗೆ 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಡಾ. ಹಿಮಾಂಶು ರೈ ಮಾತನಾಡಿದ್ದಾರೆ.
ಡಾ. ಹಿಮಾಂಶು ರೈ ಕಳೆದ 25 ವರ್ಷಗಳಿಂದ ಸ್ತ್ರೀ ರೋಗ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ತಂದೆ ಡಾ. ಶಾಂತಿ ರೈ ಕೂಡ ಸ್ತ್ರೀ ರೋಗ ತಜ್ಞರಾಗಿದ್ದು, ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
ಸ್ತ್ರೀರೋಗ ತಜ್ಞರಾಗಿ ಎದುರಿಸಬೇಕಾದ ಸವಾಲುಗಳೇನು?:ಈ ಪ್ರಶ್ನೆಗೆ ಉತ್ತರಿಸಿದ ಡಾ. ರೈ, ಆರಂಭದಲ್ಲಿ ಸಮಸ್ಯೆ ಇದೆ. ಏಕೆಂದರೆ ಮಹಿಳೆಯರು ಇಂತಹ ಸಮಸ್ಯೆಗಳೊಂದಿಗೆ ಮಹಿಳಾ ವೈದ್ಯರ ಬಳಿಗೆ ಹೋಗಲು ಬಯಸುತ್ತಾರೆ. ಪುರುಷ ವೈದ್ಯರೊಂದಿಗೆ ಅಂತಹ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಲು ಹಿಂಜರಿಯುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಸ್ತ್ರೀಯರ ಬಗ್ಗೆ ಮಹಿಳೆಯರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ ಎಂದಲ್ಲ. ಒಬ್ಬ ವೈದ್ಯನಿಗೆ ಗಂಡು ಹೆಣ್ಣೆಂಬ ಭೇದವಿಲ್ಲ. ವರದಿಗಾರನನ್ನು ಹೇಗೆ ವರದಿಗಾರನಾಗಿ ಮಾತ್ರ ನೋಡಲಾಗುತ್ತದೋ ಹಾಗೇ ಅವರ ಲಿಂಗಕ್ಕೂ ಅವರ ವೃತ್ತಿಗೂ ಯಾವುದೇ ಸಂಬಂಧವಿಲ್ಲ ಎಂದರು.