ಕರ್ನಾಟಕ

karnataka

ETV Bharat / bharat

ಕೊರೊನಾ ಮರಣ ಮೃದಂಗ.. ಕಾರ್​ ಪಾರ್ಕಿಂಗ್​ನಲ್ಲೇ ಮೃತರ ಅಂತ್ಯಕ್ರಿಯೆ! ವಿಡಿಯೋ - ಕೊರೊನಾ ಮರಣ ಮೃದಂಗ,

ಕೊರೊನಾದಿಂದ ಮೃತಪಟ್ಟ ರೋಗಿಗಳ ಅಂತ್ಯಕ್ರಿಯೆಯನ್ನು ಕಾರ್​ ಪಾರ್ಕಿಂಗ್​ನಲ್ಲೇ ನೆರವೇರಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

gurugram Crematorium less space  gurugram Crematorium less space corona death  gurugram Crematorium corona death  gurugram corona death cremation car parking  ಕಾರ್​ ಪಾರ್ಕಿಂಗ್​ನಲ್ಲೇ ಕೊರೊನಾ ಮೃತ ರೋಗಿಗಳ ಅಂತ್ಯಕ್ರಿಯೆ  ಗುರುಗ್ರಾಮ್​ನಲ್ಲಿ ಕಾರ್​ ಪಾರ್ಕಿಂಗ್​ನಲ್ಲೇ ಕೊರೊನಾ ಮೃತ ರೋಗಿಗಳ ಅಂತ್ಯಕ್ರಿಯೆ  ಕಾರ್​ ಪಾರ್ಕಿಂಗ್​ನಲ್ಲೇ ಕೊರೊನಾ ಮೃತ ರೋಗಿಗಳ ಅಂತ್ಯಕ್ರಿಯೆ ಸುದ್ದಿ
ಕಾರ್​ ಪಾರ್ಕಿಂಗ್​ನಲ್ಲೇ ಕೊರೊನಾ ಮೃತ ರೋಗಿಗಳ ಅಂತ್ಯಕ್ರಿಯೆ

By

Published : Apr 26, 2021, 2:44 PM IST

ಗುರುಗ್ರಾಮ್(ಹರಿಯಾಣ)​:ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಗುರುಗ್ರಾಮದಲ್ಲಿ ಕೋವಿಡ್​ನಿಂದ ಮೃತಪಡುತ್ತಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರಿಂದಾಗಿ ಶವಸಂಸ್ಕಾರ ಘಟಕದಲ್ಲಿ ಮೃತದೇಹಗಳನ್ನು ಅಂತ್ಯಕ್ರಿಯೆ ಮಾಡಲು ಸ್ಥಳದ ಕೊರತೆ ಉಂಟಾಗುತ್ತಿದೆ.

ಕಾರ್​ ಪಾರ್ಕಿಂಗ್​ನಲ್ಲೇ ಕೊರೊನಾ ಮೃತ ರೋಗಿಗಳ ಅಂತ್ಯಕ್ರಿಯೆ

ನಗರದ ಪ್ರತಿ ಚಿತಾಗಾರಗಳು ಪೂರ್ತಿಯಾಗಿದ್ದು, ಸ್ಥಳ ಸಿಗದೇ ಶವ ಸಂಸ್ಕಾರವನ್ನು ಕಾರ್​ ಪಾರ್ಕಿಂಗ್​ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಕೊರೊನಾದಿಂದ ಸಾವನ್ನಪ್ಪಿದವರ ಶವ ಸಂಸ್ಕಾರ ನಡೆಸಲು ಘಟಕದಲ್ಲಿ ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಕಾರ್​ ಪಾರ್ಕಿಂಗ್​ನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ ಎಂದು ಶವಾಗಾರ ಘಟಕದ ಸಿಬ್ಬಂದಿ ಹೇಳುತ್ತಾರೆ.

ಶವಾಗಾರ ಘಟಕದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರಿಗೆ ಮೋಕ್ಷ ಒದಗಿಸಲು ಸಂಬಂಧ ಕುಟುಂಬಸ್ಥರು ಕಾಯುತ್ತಿದ್ದಾರೆ. ರಾತ್ರಿಯಾದ್ರೂ ಶವಾಗಾರ ಘಟಕದ ಮುಂದೆ ಆ್ಯಂಬುಲೆನ್ಸ್​ಗಳು ಸಾಲುಗಟ್ಟಿ ನಿಲ್ಲುತ್ತಿವೆ ಎಂಬುದು ಕೆಲಸಗಾರರ ಮಾತಾಗಿದೆ.

ABOUT THE AUTHOR

...view details