ಕರ್ನಾಟಕ

karnataka

ETV Bharat / bharat

ಇವರೆಂಥಾ ಕೆಲಸ ಮಾಡಿದ್ದಾರೆ ನೋಡಿ!.. ವರದಕ್ಷಿಣೆಗಾಗಿ ಬಾಯಿಗೆ ಆ್ಯಸಿಡ್​​ ಸುರಿದ ಪತಿ, ಕುಟುಂಬಸ್ಥರು - ಆ್ಯಸಿಡ್​​ ಸುರಿದ ಪತಿ ಹಾಗೂ ಕುಟುಂಬಸ್ಥರು

ಗಂಡ ಮತ್ತು ಕುಟುಂಬಸ್ಥರು ಥಳಿಸುತ್ತಿದ್ದಾರೆ ಮತ್ತು ವಿಷ ಕುಡಿಯಲು ಒತ್ತಾಯಿಸುತ್ತಿದ್ದಾರೆಂದು ತನ್ನ ತಂದೆಗೆ ಕರೆ ಮಾಡಿ ಮಗಳು ತಿಳಿಸಿದ್ದಾಳೆ. ವಿಷಯ ತಿಳಿದ ಸಂತ್ರಸ್ತೆ ತಂದೆ ಶರ್ಮಾ ತಕ್ಷಣವೇ ಬಹೇಡಿ ಪೊಲೀಸರಿಗೆ ಮಾಹಿತಿ ನೀಡಿ, ಮಗನೊಂದಿಗೆ ಯಶೋದಾ ಮನೆಗೆ ಧಾವಿಸಿದ್ದಾರೆ. ಅಷ್ಟೊತ್ತಿಗಾಗಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗಳಿರುವುದನ್ನು ನೋಡಿದ್ದಾರೆ. ಈ ವೇಳೆ ಪತಿ ಮತ್ತು ಕುಟುಂಬ ಸದಸ್ಯರು ಪರಾರಿಯಾಗಿದ್ದರು.

ಆ್ಯಸಿಡ್​​
ಆ್ಯಸಿಡ್​​

By

Published : May 22, 2021, 4:58 PM IST

ಬರೇಲಿ (ಯುಪಿ):ವರದಕ್ಷಿಣೆಗಾಗಿ ಗಂಡ ಸೇರಿದಂತೆ ಆತನ ಕುಟುಂಬ 21 ವರ್ಷದ ಯುವತಿಯ ಮೇಲೆ ಹಲ್ಲೆ ನಡೆಸಿ ಆಕೆಯ ಬಾಯಿಗೆ ಆಸಿಡ್ ಸುರಿದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಸಂತ್ರಸ್ತೆ ಯಶೋದಾ ದೇವಿ. ಈಕೆಗೆ ತನ್ನ ಗಂಡ ಮತ್ತು ಕುಟುಂಬಸ್ಥರು ಥಳಿಸುತ್ತಿದ್ದಾರೆ ಮತ್ತು ವಿಷ ಕುಡಿಯಲು ಒತ್ತಾಯಿಸುತ್ತಿದ್ದಾರೆ ಎಂದು ತನ್ನ ತಂದೆಗೆ ಕರೆ ಮಾಡಿ ತಿಳಿಸಿದ್ದಾಳೆ. ವಿಷಯ ತಿಳಿದ ಸಂತ್ರಸ್ತೆ ತಂದೆ ಶರ್ಮಾ ತಕ್ಷಣವೇ ಬಹೇಡಿ ಪೊಲೀಸರಿಗೆ ಮಾಹಿತಿ ನೀಡಿ, ಮಗನೊಂದಿಗೆ ಯಶೋದಾ ಮನೆಗೆ ಧಾವಿಸಿದ್ದಾರೆ. ಅಷ್ಟೊತ್ತಿಗಾಗಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗಳಿರುವುದನ್ನು ನೋಡಿದ್ದಾರೆ. ಈ ವೇಳೆ ಪತಿ ಮತ್ತು ಕುಟುಂಬ ಸದಸ್ಯರು ಪರಾರಿಯಾಗಿದ್ದರು.

ಸಂತ್ರಸ್ತೆ ಯಶೋದಾ ದೇವಿ

ಶರ್ಮಾ ತನ್ನ ಮಗಳನ್ನು ಕೂಡಲೇ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಆಕೆಯ ಗಂಭೀರ ಸ್ಥಿತಿಯನ್ನು ನೋಡಿದ ವೈದ್ಯರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದಾರೆ. ಈ ವೇಳೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಯಶೋದಾ ಸಾವನ್ನಪ್ಪಿದ್ದಾಳೆ.

ಈ ಕುರಿತು ಬಹೇಡಿ ಠಾಣೆಯ ಕೃಷ್ಣ ಮುರಾರಿ ಮಾಹಿತಿ ನೀಡಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಸಂತ್ರಸ್ತೆಯ ಪತಿ ಹಾಗೂ ಕುಟುಂಬಸ್ಥರು ಪರಾರಿಯಾಗಿದ್ದಾರೆ. ಸತ್ತವರ ಕುಟುಂಬದಿಂದ ಲಿಖಿತ ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

ABOUT THE AUTHOR

...view details