ಲಕ್ಸಾರ್(ಉತ್ತರಾಖಂಡ):ಅತ್ತೆಯು ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ ಮನಬಂದಂತೆ ಥಳಿಸಿ ಮನೆಯಿಂದ ಹೊರಗೆ ಹಾಕಿರುವ ಅಮಾನವೀಯ ಘಟನೆ ನಡೆಯಿದೆ. ಇದೇ ವಿಚಾರಕ್ಕೆ ತನ್ನ ಪತ್ನಿಗೆ ಪತಿಯು ಕೂಡಾ ತ್ರಿವಳಿ ತಲಾಖ್ ನೀಡಿದ್ದಾರೆ. ಸಂತ್ರಸ್ತೆಯು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಆರೋಪಿ ಅತ್ತೆ ಹಾಗೂ ಪತಿ ವಿರುದ್ಧ ಪ್ರಕರಣ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ವರದಕ್ಷಿಣೆ ಕಿರುಕುಳ ನೀಡಿದ ಆರೋಪ:ಲಕ್ಸರ್ ಕೊತ್ವಾಲಿ ಪ್ರದೇಶದ ಸುಲ್ತಾನಪುರ ಗ್ರಾಮದ ನಿವಾಸಿ ಮಹಿಳೆಯೊಬ್ಬರು, ವರದಕ್ಷಿಣೆ ಕಿರುಕುಳ ನೀಡಿ ತಮ್ಮ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಹರಿದ್ವಾರ ಜಿಲ್ಲೆಯ ರಾಣಿಪುರ ಕೊಟ್ವಾಲಿ ಪ್ರದೇಶದ ಗಢ್‌ಗಾಂವ್‌ನ ನಿವಾಸಿ ಮೊಹ್ತಾರಾಮ್ ಅವರನ್ನು ಐದು ವರ್ಷಗಳ ಹಿಂದೆ ಮದುವೆಯಾಗಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಮದುವೆಯಲ್ಲಿ ಮಹಿಳೆ ಸಂಬಂಧಿಕರು ತಮ್ಮ ಸ್ಥಾನಮಾನಕ್ಕಿಂತ ಹೆಚ್ಚಿನ ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದರು. ಆದರೆ, ಆಕೆಯ ಅತ್ತೆಗೆ ಇದರಿಂದ ತೃಪ್ತರಾಗಿರಲಿಲ್ಲ.
ಒಂದು ಲಕ್ಷ ರೂಪಾಯಿ ಹಾಗೂ ಕಾರ್ ಕೇಳುತ್ತಿದ್ದರು:ಮದುವೆಯಾದಾಗಿನಿಂದ ತನ್ನ ಪತಿ ಮತ್ತು ಅತ್ತೆ ವರದಕ್ಷಿಣೆಯಾಗಿ ಒಂದು ಲಕ್ಷ ನಗದು ಮತ್ತು ಕಾರ್ಗೆ ಒತ್ತಾಯಿಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಬೇಡಿಕೆ ಈಡೇರದ ಕಾರಣ ಮದುವೆಯಾದಾಗಿನಿಂದ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ. ಅಷ್ಟರಲ್ಲಿ ಈ ಮಹಿಳಗೆ ಒಂದು ಗಂಡು ಮಗು ಜನಿಸಿದೆ. ಇದಾದ ನಂತರವೂ ಅತ್ತಿಗೆಯ ವರ್ತನೆ ಮಾತ್ರ ಬದಲಾಗಲಿಲ್ಲ. ಅವರಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದರು.