ಡಿಯೋರಿಯಾ(ಉತ್ತರ ಪ್ರದೇಶ):ಸುಮಾರು 80 ವರ್ಷಗಳಷ್ಟು ಹಳೆಯದಾದ ಎರಡಂತಸ್ತಿನ ಕಟ್ಟಡ ಕುಸಿದು ಎರಡು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಅಸುನೀಗಿದ್ದಾರೆ. ಉತ್ತರ ಪ್ರದೇಶದ ಡಿಯೋರಿಯಾ ಎಂಬಲ್ಲಿ ಘಟನೆ ನಡೆಯಿತು.
80 ವರ್ಷ ಹಳೆಯ ಎರಡಂತಸ್ತಿನ ಕಟ್ಟಡ ಕುಸಿತ: ಮಗು ಸೇರಿ ಮೂವರ ಸಾವು - ಮಳೆಗೆ ಕುಸಿದ ಎರಡಂತಸ್ತಿನ ಕಟ್ಟಡ
ಭಾರಿ ಮಳೆಯಿಂದಾಗಿ ಎರಡಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾಗಿದ್ದಾರೆ.
![80 ವರ್ಷ ಹಳೆಯ ಎರಡಂತಸ್ತಿನ ಕಟ್ಟಡ ಕುಸಿತ: ಮಗು ಸೇರಿ ಮೂವರ ಸಾವು double story house collapsed in UP](https://etvbharatimages.akamaized.net/etvbharat/prod-images/768-512-16410060-thumbnail-3x2-wdfdfdf.jpg)
double story house collapsed in UP
80 ವರ್ಷ ಹಳೆಯ ಎರಡಂತಸ್ತಿನ ಕಟ್ಟಡ ಕುಸಿತ
ಮೃತರನ್ನು ದಿಲೀಪ್ (35), ಚಾಂದನಿ (30) ಹಾಗೂ ಎರಡು ವರ್ಷದ ಮಗು ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಹೊರೆತೆಗೆದು ಮರಣೋತ್ತರ ಪರೀಕ್ಷೆಗೋಸ್ಕರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಗೋಡೆ ತೇವಗೊಂಡು ಕಟ್ಟಡ ಕುಸಿದು ಬಿದ್ದಿದೆ ಎಂದು ಹೇಳಲಾಗ್ತಿದೆ. ಮಳೆಯಿಂದಾಗಿ ಕಳೆದ ಶುಕ್ರವಾರ ನಡೆದ ವಿವಿಧ ಘಟನೆಗಳಲ್ಲಿ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.