ಕರ್ನಾಟಕ

karnataka

ಮೇ 2ಕ್ಕೆ 'ಡಬಲ್ ಇಂಜಿನ್'ಮಾತ್ರವಲ್ಲ, 'ಡಬಲ್ ಲಾಭ' ನೀಡುವ ಸರ್ಕಾರ ರಚನೆ : ಮೋದಿ

By

Published : Apr 3, 2021, 5:22 PM IST

ಬಿಜೆಪಿ ರ‍್ಯಾಲಿಗಳಲ್ಲಿ ಭಾಗವಹಿಸಲು ಜನ ಹಣ ತೆಗೆದುಕೊಳ್ಳುತ್ತಾರೆ ಎಂದು ದೀದಿ ಹೇಳುತ್ತಾರೆ. ಬಂಗಾಳಿಗಳು ಸ್ವಾಭಿಮಾನಿಗಳು. ಈ ಹೇಳಿಕೆಯಿಂದ ನೀವು ಬಂಗಾಳದ ಜನರನ್ನು ಅವಮಾನಿಸಿದ್ದೀರಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮೋದಿ ಕಿಡಿಕಾರಿದರು..

PM Narendra Modi in Hooghly
ಪ್ರಧಾನಿ ನರೇಂದ್ರ ಮೋದಿ

ಹೂಗ್ಲಿ (ಪಶ್ಚಿಮ ಬಂಗಾಳ) : ಮೇ 2ರಂದು ರಚನೆಯಾಗುವ ಸರ್ಕಾರವು 'ಡಬಲ್ ಇಂಜಿನ್' ಸರ್ಕಾರ ಮಾತ್ರ ಆಗಿರುವುದಿಲ್ಲ. 'ಡಬಲ್ ಲಾಭ' ನೀಡುವ ಸರ್ಕಾರವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಇಂದು ಹೂಗ್ಲಿಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ (ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ)ದ ಬಗ್ಗೆ ಜನರಿಗೆ ತಿಳಿಸಿದರು.

ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅಂದು ರಚನೆಯಾಗೋದು ಡಬಲ್ ಇಂಜಿನ್ ಸರ್ಕಾರ ಮಾತ್ರವಲ್ಲ, ಡಬಲ್ ಲಾಭ, ನೇರ ಲಾಭ ನೀಡುವ ಸರ್ಕಾರ. ಮೊದಲ ಸಂಪುಟ ಸಭೆಯಲ್ಲಿಯೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನುಷ್ಠಾನಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು.

ನಮ್ಮ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಾನು ಭಾಗವಹಿಸುತ್ತೇನೆ ಎಂದು ಹೇಳುವ ಮೂಲಕ ಮೋದಿ, ಈ ಬಾರಿ ಬಂಗಾಳದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಂಗಾಳಿಗರನ್ನು ದೀದಿ ಅವಮಾನಿಸಿದ್ದಾರೆ :ಬಿಜೆಪಿ ರ‍್ಯಾಲಿಗಳಲ್ಲಿ ಭಾಗವಹಿಸಲು ಜನ ಹಣ ತೆಗೆದುಕೊಳ್ಳುತ್ತಾರೆ ಎಂದು ದೀದಿ ಹೇಳುತ್ತಾರೆ. ಬಂಗಾಳಿಗಳು ಸ್ವಾಭಿಮಾನಿಗಳು. ಈ ಹೇಳಿಕೆಯಿಂದ ನೀವು ಬಂಗಾಳದ ಜನರನ್ನು ಅವಮಾನಿಸಿದ್ದೀರಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಮೋದಿ ಕಿಡಿಕಾರಿದರು.

ಮೇ 2ರಂದು ಚುನಾವಣೆ ಫಲಿತಾಂಶ ಘೋಷಿಸಿದಾಗ ನಂದಿಗ್ರಾಮದಲ್ಲಿ ಏನಾಗಲಿದೆ ಎಂಬುದರ ನೋಟ ನಮ್ಮ ಕಣ್ಮುಂದಿದೆ ಎಂದು ಮಮತಾ ಸೋಲಿನ ಭವಿಷ್ಯ ನುಡಿದರು. ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಎರಡು ಹಂತಗಳ ಮತದಾನ ನಡೆದಿದೆ.

ABOUT THE AUTHOR

...view details