ಲಖನೌ(ಉತ್ತರಪ್ರದೇಶ) :ಚಳಿಗಾಲ ಆರಂಭದ ಮುನ್ನವೇ ಉತ್ತರ ಪ್ರದೇಶದಲ್ಲಿಸರಕಾರವು ರಾಷ್ಟ್ರೀಯ ಉದ್ಯಾನಗಳ ಬಾಗಿಲು ತೆರದಿದ್ದು, ಇದು ವಿದೇಶ ಹಾಗೂ ದೇಶದ ಅರಣ್ಯ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದೆ. ದುಧ್ವಾ ರಾಷ್ಟ್ರೀಯ ಉದ್ಯಾನ ಮತ್ತು ಕತರ್ನಿಯಾಘಾಟ್ ರಾಷ್ಟ್ರೀಯ ಉದ್ಯಾನವನದಲ್ಲಿ ದೇಶದಲ್ಲೇ ಹೆಚ್ಚು ಹುಲಿಗಳಿದ್ದು, ಅರಣ್ಯ ಪ್ರೇಮಿಗಳು ಸಫಾರಿ ಮೂಲಕ ಆನಂದಿಸಬಹುದಾಗಿದೆ.
ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶ ಮತ್ತು ಚುಕಾ ಬೀಚ್ ದಲ್ಲೂ ಅಪಾರ ಅರಣ್ಯ ಸಂಪತ್ತು, ನವಾಬ್‌ಗಂಜ್ ಪಕ್ಷಿಧಾಮವು ಆಹ್ಲಾದಕರ ವಾತಾವರಣ ಇದ್ದು ಅರಣ್ಯಪ್ರೇಮಿಗಳಿಗೆ ಸಂತೋಷ ಮೂಡಿಸಲಿದೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಉತ್ತರ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಸರ್ಕಾರ ಇನ್ನೂ ಹೆಚ್ಚಿನ ಗಂಭೀರ ಚಿಂತನೆ ನಡೆಸಿದೆ. ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಯೋಜನೆ ಜಾರಿಗೊಳಿಸಿದೆ. ಪರಿಸರ ಪ್ರೇಮಿಗಳು ಅರಣ್ಯದಲ್ಲಿ ಉಳಿಯಲು ಅದ್ಭುತವಾದ ವ್ಯವಸ್ಥೆ ಸಹ ಕಲ್ಪಿಸಿದೆ. ದಟ್ಟವಾದ್ ಅರಣ್ಯದಲ್ಲಿ ಜಂಗಲ್ ಸಫಾರಿ ಮೂಲಕ ಕಾಡಿನ ಸೌಂದರ್ಯ , ಪ್ರಾಣಿಗಳ ಕಾರ್ಯವೈಖರಿ ನೋಟವನ್ನು ನೇರ ನೋಡಿ ಆನಂದಿಸಬಹುದು.
ಉತ್ತರ ಪ್ರದೇಶದ ವನ್ಯಜೀವಿ ವಾರ್ಡ್ನ್ ಮಮತಾ ಸಂಜೀವ್ ದುಬೆ ಮಾತನಾಡಿ, ಪರಿಸರ ಪ್ರವಾಸೋದ್ಯಮ ರಾಜ್ಯದಲ್ಲಿ ತೀವ್ರಗತಿ ಅಭಿವೃದ್ಧಿ ಸಾಧಿಸುತ್ತಿದೆ. ಹೀಗಾಗಿ ಐದು ವರ್ಷಗಳಲ್ಲಿ ಉತ್ತರಪ್ರದೇಶ ಆಗಮಿಸುವ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ದುಧ್ವಾದಿಂದ ಇಟಾವಾ ಮತ್ತು ಪಿಲಿಭಿತ್‌ನಿಂದ ಬಹ್ರೈಚ್‌ವರೆಗೆ ದೇಶ ಹಾಗೂ ಪ್ರಪಂಚದ ವಿವಿಧ ದೇಶದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಯಾವ ರೀತಿಯ ಸಾಧನ ಇಲ್ಲಿ ಲಭ್ಯವಿವೆ, ತಂಗಲೂ ಮತ್ತು ಆಹಾರಕ್ಕೆ ಯಾವ ವ್ಯವಸ್ಥೆಗಳಿವೆ. https://www.upecotourism.in ಈ ವೆಬ್‌ಸೈಟ್ ಸಂಪೂರ್ಣ ವಿವರ ನೀಡಲಿದ್ದು, ಜತೆಗೆ ಪ್ಯಾಕೇಜ್‌ಗಳನ್ನು ಸಹ ಪಡೆಯಬಹದು. ಇದು ಏಕ ಗವಾಕ್ಷಿ ವ್ಯವಸ್ಥೆಯಾಗಿದ್ದು, ಇದರಲ್ಲಿ ಸಂಪೂರ್ಣ ಉತ್ತರ ಪ್ರದೇಶದ ಪರಿಸರ ಪ್ರವಾಸೋದ್ಯಮ ಬೆಳವಣಿಗೆ ಬಗ್ಗೆ ಸೇರಿಸಲಾಗಿದೆ.