ಕರ್ನಾಟಕ

karnataka

ETV Bharat / bharat

ನಂದಿಗ್ರಾಮ​ದ ಜನರು ತಮಗೆ ಬೇಕಾದ ತೀರ್ಪು ನೀಡಲಿ, ಸ್ವೀಕರಿಸುತ್ತೇನೆ: ಮಮತಾ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಬಿಜೆಪಿ ಸೋಲು ಕಂಡಿದೆ. ನಾನು ನಂದಿಗ್ರಾಮ್​ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ನೀಡುವ ತೀರ್ಪು ಸ್ವೀಕರಿಸುತ್ತೇನೆ ಎಂದಿದ್ದಾರೆ ಮಮತಾ.

CM Mamata Banerjee
CM Mamata Banerjee

By

Published : May 2, 2021, 6:44 PM IST

Updated : May 2, 2021, 7:48 PM IST

ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ಭರ್ಜರಿ ಮುನ್ನಡೆ ಪಡೆದುಕೊಂಡಿದ್ದು, ಈಗಾಗಲೇ 216ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಈ ಮಧ್ಯೆ ಮಮತಾ ಸ್ಪರ್ಧಿಸಿರುವ ನಂದಿಗ್ರಾಮ​ ಕ್ಷೇತ್ರದ ಫಲಿತಾಂಶ ಅಧಿಕೃತವಾಗಿ ಹೊರಬಿದ್ದಿಲ್ಲ.

ಚುನಾವಣೆಯಲ್ಲಿ ಟಿಎಂಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ ಸಿಎಂ ಮಮತಾ ಬ್ಯಾನರ್ಜಿ ಮಾಧ್ಯಮಗೋಷ್ಟಿ ನಡೆಸಿದ್ದು, ನಂದಿಗ್ರಾಮದ ಬಗ್ಗೆ ನಾನು ಚಿಂತಿಸಿಲ್ಲ. ನಂದಿಗ್ರಾಮ​ಕ್ಕಾಗಿ ಹೋರಾಡಿದ್ದೇನೆ. ಅಲ್ಲಿನ ಜನರು ತಮಗೆ ಬೇಕಾದ ತೀರ್ಪು ನೀಡಲಿ. ನಾನು ಅದನ್ನ ಸ್ವೀಕರಿಸುತ್ತೇನೆ. ಆದರೆ ನಾವು ಈಗಾಗಲೇ 221ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇವೆ. ಈ ಚುನಾವಣೆಯಲ್ಲಿ ಬಿಜೆಪಿ ಸೋತಿದೆ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೆಟ್ಟ ರಾಜಕಾರಣ ಮಾಡಿರುವ ಬಿಜೆಪಿ ಸೋಲು ಕಂಡಿದೆ. ಚುನಾವಣಾ ಆಯೋಗದಿಂದಲೂ ನಾವು ಅನೇಕ ತೊಂದರೆ ಅನುಭವಿಸಿದ್ದೇವೆ ಎಂದು ಬ್ಯಾನರ್ಜಿ ಹೇಳಿದ್ದಾರೆ. ಈ ಐತಿಹಾಸಿಕ ಸಾಧನೆಗೆ ನಾವು ಇಲ್ಲಿನ ಜನರಿಗೆ ಆಭಾರಿಯಾಗಿದ್ದೇವೆ. ಇದೀಗ ಕೋವಿಡ್​ ವಿರುದ್ಧದ ಹೋರಾಟದಲ್ಲಿ ನಾವು ಮುಂದುವರೆಯುತ್ತೇವೆ ಎಂದಿದ್ದಾರೆ.

ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ ಈಗಾಗಲೇ ಟಿಎಂಸಿ 216ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತವಾಗಿದೆ. ಆದರೆ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ನಂದಿಗ್ರಾಮದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಮೂಡಿದೆ. ಇಲ್ಲಿ ಬಿಜೆಪಿಯಿಂದ ಸುವೇಂದು ಅಧಿಕಾರಿ ಕಣಕ್ಕಿಳಿದಿದ್ದಾರೆ.

Last Updated : May 2, 2021, 7:48 PM IST

ABOUT THE AUTHOR

...view details