ನವದೆಹಲಿ: ಱಲಿ, ಪ್ರತಿಭಟನೆಗಳಲ್ಲಿ ಭಾಗವಹಿಸುವ ಸೈನಿಕರು ಹಾಗೂ ಮಾಜಿ ಸೈನಿಕರು, ಸೇನೆಯ ರಿಬ್ಬನ್ ಹಾಗೂ ಪದಕಗಳನ್ನು ಧರಿಸುವಂತಿಲ್ಲ ಎಂದು ಭಾರತೀಯ ಸೇನೆ ಸೂಚಿಸಿದೆ.
ಪ್ರತಿಭಟನೆಗಳಲ್ಲಿ ಭಾಗಿಯಾಗುವ ಮಾಜಿ ಸೈನಿಕರು ರಿಬ್ಬನ್, ಪದಕ ಧರಿಸುವಂತಿಲ್ಲ: ಸೇನೆ - ಟ್ರ್ಯಾಕ್ಟರ್ ಱಲಿಯಲ್ಲಿ ಭಾಗಿಯಾಗಲಿರುವ ಮಾಜಿ ಸೈನಿಕರು
ಱಲಿ ಹಾಗೂ ಪ್ರತಿಭಟನೆಗಳಲ್ಲಿ ಭಾಗಿಯಾಗುವ ಮಾಜಿ ಸೈನಿಕರು ಸೇನೆಯ ರಿಬ್ಬನ್ ಹಾಗೂ ಪದಕಗಳನ್ನು ಧರಿಸುವಂತಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.
ಸೇನೆ
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳಲ್ಲಿ ಬಹುತೇಕ ಮಾಜಿ ಸೈನಿಕರು ಭಾಗಿಯಾಗುತ್ತಿದ್ದು, ಸೇನೆಯ ಪದಕ ಹಾಗೂ ರಿಬ್ಬನ್ಗಳನ್ನು ಧರಿಸುತ್ತಿದ್ದಾರೆ. ಇದು ಸೇನೆಯ ನಿಯಮಗಳಿಗೆ ವಿರುದ್ಧವಾದುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ಱಲಿಯಲ್ಲಿ ಮಾಜಿ ಸೈನಿಕರು ಸೇನೆಯ ಉಡುಪು, ಪದಕ ಹಾಗೂ ರಿಬ್ಬನ್ಗಳನ್ನು ಧರಿಸಿ ಭಾಗಿಯಾಗಲಿದ್ದಾರೆ ಎಂದು ಕೆಲ ರಾಜಕೀಯ ಮುಖಂಡರು ತಿಳಿಸಿದ್ದರು. ಹಾಗಾಗಿ ಭಾರತೀಯ ಸೇನೆ ಈ ಸ್ಪಷ್ಟನೆ ನೀಡಿದೆ.
TAGGED:
latest news on Indian Army