ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ವಿಧಾನಸಭೆ ಚುನಾವಣೆ ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಎಂಟು ಹಂತಗಳಲ್ಲಿ ನಡೆಯಲಿದೆ. ಈ ಹಿನ್ನೆಲೆ ಟಿಕಾಯತ್ ಬಂಗಾಳದ ರೈತರಲ್ಲಿ ಬಿಜೆಪಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನದಲ್ಲಿ ಪ್ರಮುಖರಾಗಿರುವ ಟಿಕಾಯತ್ ಅವರನ್ನು ವಿಮಾನ ನಿಲ್ದಾಣದಲ್ಲಿ ಟಿಎಂಸಿ ಸಂಸದ ಡೋಲಾ ಸೇನ್ ಅವರು ಸ್ವಾಗತ ಮಾಡಿಕೊಂಡರು. ನಂತರ ನಗರದ ಮತ್ತು ಪೂರ್ವ ಮಿಡ್ನಾಪೋರ್ ಜಿಲ್ಲೆಯ ನಂದಿಗ್ರಾಮದಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರೊಂದಿಗೆ ಸಭೆಯಲ್ಲಿ ಭಾಗಿಯಾದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ರೈತರ ಬೆನ್ನೆಲುಬು ಮತ್ತು ರೈತರ ಆಂದೋಲನವನ್ನು ನಾಶಪಡಿಸುವ ಉದ್ದೇಶ ಹೊಂದಿದೆ. ಇದು ಜನ ವಿರೋಧಿ ಸರ್ಕಾರ. ಈ ಹಿನ್ನೆಲೆ ಬಿಜೆಪಿಗೆ ಮತ ಹಾಕಬೇಡಿ. ಅವರಿಗೆ ಮತ ಹಾಕಿದರೆ ಅವರು ನಿಮ್ಮ ಭೂಮಿಯನ್ನು ದೊಡ್ಡ ಕಾರ್ಪೊರೇಟ್ ಮತ್ತು ಕೈಗಾರಿಕೆಗಳಿಗೆ ಬಿಟ್ಟುಕೊಡುತ್ತಾರೆ ಮತ್ತು ನಿಮ್ಮನ್ನು ಭೂಹೀನರನ್ನಾಗಿ ಮಾಡುತ್ತಾರೆ. ಅವರು ನಿಮ್ಮ ಜೀವನೋಪಾಯವನ್ನು ಅಪಾಯದಲ್ಲಿಟ್ಟುಕೊಂಡು ದೊಡ್ಡ ಕೈಗಾರಿಕೋದ್ಯಮಿ ಗುಂಪುಗಳಿಗೆ ದೇಶವನ್ನು ಹಸ್ತಾಂತರಿಸುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.