ಕಂಠಿ (ಪೂರ್ವ ಮೇದಿನಿಪುರ): ಪಶ್ಚಿಮ ಬಂಗಾಳದ ಪ್ರತಿ ಪಕ್ಷದ ನಾಯಕ, ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರ ಪೂರ್ವ ಮೇದಿನಿಪುರ ಜಿಲ್ಲೆಯ ಸ್ವಗ್ರಾಮ ಕಂಠಿಯಲ್ಲಿ ಅವರ ಹೆಸರಿನಲ್ಲಿ ವಿವಾದಿತ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. 'ನನ್ನನ್ನು ಮುಟ್ಟಬೇಡಿ, ನಾನು ಸಲಿಂಗಕಾಮಿ, ನಾನು ದ್ವಿಲಿಂಗಿ, ನನಗೆ ಪುರುಷ ಮಾತ್ರ ಬೇಕು, ಬಂಗಾಳದ ದೊಡ್ಡ ಕಳ್ಳ' ಎಂಬೆಲ್ಲ ಬರಹಗಳುಳ್ಳ ಪೋಸ್ಟರ್ಗಳಾಗಿದ್ದು, ಇದು ರಾಜಕೀಯ ಕಿತ್ತಾಟಕ್ಕೂ ನಾಂದಿ ಹಾಡಿದೆ.
ಈ ಪೋಸ್ಟರ್ಗಳಲ್ಲಿ ಸುವೇಂದು ಅಧಿಕಾರಿ ಅವರ ಭಾವಚಿತ್ರವನ್ನೂ ಅಂಟಿಸಲಾಗಿದೆ. ಕಳೆದ ರಾತ್ರಿ ಕತ್ತಲಲ್ಲಿ ಇವುಗಳನ್ನು ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದು ಆರೋಪಿಸಲಾಗಿದೆ. ಕಂಠಿ ಗ್ರಾಮದಲ್ಲಿರುವ ಸುವೇಂದು ಅಧಿಕಾರಿ ಅವರ ಮನೆ ಸುತ್ತಮುತ್ತಲೂ ಈ ಪೋಸ್ಟರ್‌ಗಳನ್ನು ಹಾಕಲಾಗಿದೆ. ಅಲ್ಲದೇ, ಬಸ್ ನಿಲ್ದಾಣ, ಬೈಪಾಸ್ ರಸ್ತೆಗಳು ಸೇರಿ ವಿವಿಧ ಸ್ಥಳಗಳಲ್ಲೂ ಈ ಪೋಸ್ಟರ್‌ಗಳು ಕಂಡು ಬಂದಿವೆ.