ಗೂಗಲ್ ಸರ್ಚ್ ಎಂಜಿನ್ ಎನ್ನುವುದು ಇಂದಿನ ದಿನಗಳಲ್ಲಿ ಸಹಾಯಕನಂತಿದ್ದು, ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲೇ ಒದಗಿಸುವ ಅತ್ಯದ್ಭುತ ಸಾಧನವಾಗಿದೆ. ಇಂದು ಗೂಗಲ್ನಲ್ಲಿ ಯಾವುದೇ ವಿಷಯದ ಬಗ್ಗೆ ಹುಡಕಾಟ ನಡೆಸಿದರು. ಅದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡವ ಸಾಮರ್ಥ್ಯವನ್ನು ಗೂಗಲ್ ಎಂಜಿನ್ ಹೊಂದಿದೆ. ಸರ್ಚ್ ಎಂಜಿನ್ ಪೈಕಿ ಸಧ್ಯ ಗೂಗಲ್ ಅಗ್ರ ಕ್ರಮಾಂಕದಲ್ಲಿದೆ. ಇನ್ನೂ ನಮಗೆ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸುವ ಗೂಗಲ್ ಸರ್ಚ್ ಇಂಜಿನ್ನಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಹುಡುಕಾಟ ಅಥವಾ ಮಾಹಿತಿಯನ್ನು ಪಡೆಯಲು ಯತ್ನಿಸಿದರೆ ಜೈಲಿನಲ್ಲಿ ಕಂಬಿ ಎಣಿಸಬೇಕಾಗುತ್ತದೆ ಹುಷಾರ್.
ಈ ಬಗ್ಗೆ ಹುಡುಕದಿರಿ:ಮೊದಲನೇಯದಾಗಿ ಬಾಂಬ್ ತಯಾರಿಕೆ ಬಗ್ಗೆ ಮತ್ತು ಪ್ರೇಷರ್ ಕುಕ್ಕರ್ ಬಾಂಬ್ ತಯಾರಿಕೆಯಂತಹ ವಿಷಯದ ಬಗ್ಗೆ ಹುಡುಕಾಟ ನಡೆಸಿದರೆ ಪೊಲೀಸರು ಕ್ಷಣಾರ್ಧದಲ್ಲೇ ನಿಮ್ಮ ಮನೆಯ ಬಾಗಿಲು ಮುಂದೆ ಹಾಜರಿರುತ್ತಾರೆ. ಸೆಕ್ಯೂರಿಟಿ ಸರ್ವಿಸ್ ಡಿಟೆಕ್ಟರ್ ಇಂತಹ ವಿಷಯಗಳ ಬಗ್ಗೆ ಸದಾ ಗಮನ ಹರಿಸಲಿದ್ದು, ನೀವು ಈ ಬಗ್ಗೆ ಹುಡುಕಾಟ ಮಾಡಿದ್ದೇ ಆದಲ್ಲಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಿದೆ. ಆದ ಕಾರಣ ಯಾವದೇ ಕಾರಣಕ್ಕೆ ಈ ಬಗ್ಗೆ ಹುಡುಕಾಟ ನಡೆಸದಿರಿ.
ಎರಡನೇಯದಾಗಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿಡಿಯೋಗಳ ಬಗ್ಗೆ ಹುಡುಕುವುದು ಅಪರಾಧವಾಗಿದ್ದು, ಇಂತಹ ವಿಡಿಯೋಗಳನ್ನು ನೋಡುವುದು ಅಥವಾ ಡೌನ್ಲೋಡ್ ಮಾಡಿದರೆ ಪೊಲೀಸರಿಗೆ ಮಾಹಿತಿ ಹೋಗಲಿದೆ. ಮೂರನೇಯದಾಗಿ ಅಪರಾಧಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹುಡುಕಾಟ ಮಾಡುವುದ ಅಂದರೇ ಅಪಹರಣ ಮಾಡುವುದು ಅಥವಾ ಮಾದಕ ವಸ್ತಗಳ ಬಗ್ಗೆ ಹುಡುಕುವುದು ಅಪರಾಧವಾಗಲಿದೆ.
ಇನ್ನು ಗರ್ಭಪಾತದ ಬಗ್ಗೆ ಹುಡುಕಾಟ ನಡೆಸಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಭಾರತದಲ್ಲಿ ವೈದ್ಯಕೀಯ ಗರ್ಭಪಾತದ ಬಗ್ಗೆ ಕಟುನಿಟ್ಟದಾ ನಿಯಮಗಳು ಇವೆ. ಈ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಿದರೆ ಪೊಲೀಸರು ನಿಮ್ಮ ಮೇಲೆ ನಿಗಾವಹಿಸಲಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ವಿಷಯಗಳ ಬಗ್ಗೆ ಹುಡುಕಾಟ ನಡೆಸದಿರಿ.