ನವದೆಹಲಿ:ಕೊರೊನಾ ವೈರಸ್ನಿಂದ ಭಯಭೀತರಾಗಿ ಇಲ್ಲಿ, ಅಲ್ಲಿ(ಆಸ್ಪತ್ರೆ, ಮನೆ) ಓಡಾಡಬೇಡಿ. ವೈದ್ಯರೊಂದಿಗೆ ಸಂಪರ್ಕದಲ್ಲಿರುವಾಗ ಹೆಚ್ಚಿನ ರೋಗಿಗಳು ಮನೆಯಲ್ಲೇ ಚೇತರಿಸಿಕೊಳ್ಳಬಹುದು. ನಾನು ಇದನ್ನ ಓರ್ವ ಆರೋಗ್ಯ ಸಚಿವನಾಗಿ ಮಾತ್ರವಲ್ಲ, ವೈದ್ಯನಾಗಿ ಹೇಳುತ್ತಿದ್ದೇನೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ವ್ಯಾಕ್ಸಿನೇಷನ್ ವಿಷಯದಲ್ಲಿ ರಾಜ್ಯಗಳ ಕಾರ್ಯಕ್ಷಮತೆ ಅನುಗುಣವಾಗಿ ಲಸಿಕೆ ನೀಡುತ್ತಿದ್ದೇವೆ. ಈಗಾಗಲೇ ರಾಜ್ಯಗಳಿಗೆ 16 ಕೋಟಿಗಿಂತಲೂ ಹೆಚ್ಚಿನ ಪ್ರಮಾಣದ ವ್ಯಾಕ್ಸಿನ್ ನೀಡಿದ್ದೇವೆ. ಈಗಲೂ ರಾಜ್ಯಗಳಲ್ಲಿ 1 ಕೋಟಿಗೂ ಅಧಿಕ ಪ್ರಮಾಣದ ವ್ಯಾಕ್ಸಿನ್ ಉಳಿದುಕೊಂಡಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಮತ್ತಷ್ಟು ಲಕ್ಷ ವ್ಯಾಕ್ಸಿನ್ಗಳು ರಾಜ್ಯಗಳಿಗೆ ರವಾನೆಯಾಗಲಿವೆ. ಇಲ್ಲಿಯವರೆಗೆ ನಾವು ಯಾವುದೇ ರಾಜ್ಯಕ್ಕೂ ಲಸಿಕೆ ರವಾನೆ ಮಾಡುವುದನ್ನ ವಿಳಂಬ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.