ಶ್ರೀನಗರ:ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಮೇಲೆ ಉಗ್ರಗಾಮಿಗಳು ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲಸಗಾರರು ಅಪಾಯಕಾರಿ ಜಾಗದಲ್ಲಿ ಓಡಾಡ ಬಾರದು. ಹಾಗೇ ವಲಸೆ ಕಾರ್ಮಿಕರು ಇರುವ ಬಾಡಿಗೆ ಮನೆ ಮತ್ತು ಕೆಲಸ ಮಾಡುವ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೂಚಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ಶ್ರಿನಗರ ಸುರಕ್ಷಿತವಲ್ಲ ಹೀಗಾಗಿ ಸ್ಥಳೀಯರಲ್ಲದವರನ್ನು ಊರು ತೊರೆಯುವಂತೆ ಆದೇಶಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದ್ದ ಕಾರಣ ಪೊಲೀಸರು ಈ ವಿಚಾರ ಅಲ್ಲಗಳಿದು ಅದು ಸುಳ್ಳು ಮಾಹಿತಿ ಎಂದು ಸ್ಪಷ್ಟ ಪಡಿಸಿದ್ದಾರೆ.
ಅಲ್ಲದೇ 'ಹೊರಗಿನ ಕಾರ್ಮಿಕರಿಗೆ ಅಪಾಯಕಾರಿ ಪ್ರದೇಶಗಳಲ್ಲಿ ರಾತ್ರಿಯಲ್ಲಿ ತಿರುಗಾಡದಂತೆ ಮಾತ್ರ ಸೂಚಿಸಲಾಗಿದೆ ಮತ್ತು ಭೂಮಾಲೀಕರಿಗೆ ಅವರು ಕೆಲಸ ಮಾಡುವ ಮತ್ತು ಉಳಿಯುವ ಸ್ಥಳದಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ಸೂಚಿಸಲಾಗಿದೆ' ಎಂದು ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.