ಕರ್ನಾಟಕ

karnataka

ETV Bharat / bharat

ಎಬಿವಿಪಿ ಕಾರ್ಯಕರ್ತರು ಸಹ ಕಠಿಣ ಹಾದಿಯಲ್ಲಿ ಸಾಗಿದ್ದಾರೆ : ಆರ್‌ಎಸ್‌ಎಸ್ ಮುಖ್ಯಸ್ಥ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೆಲಂಗಾಣ ಘಟಕದ ಕಚೇರಿ ಕಟ್ಟಡವನ್ನು ಮೋಹನ್ ಭಾಗವತ್​ ಉದ್ಘಾಟಿಸಿದ್ದಾರೆ..

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
http://10.10ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ .50.80:6060//finalout3/odisha-nle/thumbnail/17-June-2022/15582344_14_15582344_1655439347166.png

By

Published : Jun 17, 2022, 10:13 PM IST

ಹೈದರಾಬಾದ್(ತೆಲಂಗಾಣ) :ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಎಬಿವಿಪಿಯ ನೂತನ ಕಚೇರಿ ಕಟ್ಟಡವನ್ನು ಉದ್ಘಾಟಿಸಿ, ಸಂಘಟನೆಯ ಕಾರ್ಯಕರ್ತರು ತಮ್ಮ ಯಶಸ್ಸಿನಿಂದ ಸಂತೃಪ್ತರಾಗುವುದಷ್ಟೆ ಅಲ್ಲದೆ, ಭಗವಾನ್ ರಾಮನ ಆದರ್ಶಗಳಿಗಾಗಿ ಶ್ರಮಿಸುವಂತೆ ಸಲಹೆ ನೀಡಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೆಲಂಗಾಣ ಘಟಕದ ಕಚೇರಿ ಕಟ್ಟಡವನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಲು ಸಂಘಟನೆಯು ಸಾಗಿದ ಕಠಿಣ ಹಾದಿಯನ್ನು ಸ್ಮರಿಸಿದರು.

ಇತರ ವಿದ್ಯಾರ್ಥಿಗಳ ಸಂಘಟನೆಗಳ ಸದಸ್ಯರು ಈ ಹಿಂದೆ ಎಬಿವಿಪಿ ಕಾರ್ಯಕರ್ತರನ್ನು ಅಪಹಾಸ್ಯ ಮಾಡುತ್ತಿದ್ದರು. ಅವರು ಸರಸ್ವತಿ ದೇವಿಯನ್ನು ಪೂಜಿಸುವುದು ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಅಭಿನಂದಿಸುವುದನ್ನು ಬಿಟ್ಟು ಬೇರೇನೂ ಮಾಡಲಿಲ್ಲ. ಈಗ ಅದನ್ನು ಹೇಳಲು ಯಾರಿಗೂ ಧೈರ್ಯವಿಲ್ಲ. ಎಬಿವಿಪಿಯನ್ನು ಅತ್ಯಲ್ಪ ಎಂದು ಪರಿಗಣಿಸಿದವರು ಈಗ ಸಂಘಟನೆಯನ್ನು ಅಗ್ರಸ್ಥಾನದಲ್ಲಿ ನೋಡುತ್ತಿದ್ದಾರೆ ಎಂದು ಭಾಗವತ್ ಹೇಳಿದರು.

ಕಠಿಣ ಪರಿಶ್ರಮದಿಂದ ಈ ಪರಿವರ್ತನೆ ಸಾಧ್ಯವಾಯಿತು. ಆದಾಗ್ಯೂ, ಅನುಕೂಲವು ಕೆಲವೊಮ್ಮೆ ಪ್ರತಿಕೂಲವಾಗಿ ಪರಿಣಮಿಸುತ್ತದೆ. ಪರಿಣಾಮ ಎಚ್ಚರದ ಅಗತ್ಯವಿದೆ. ಇಲ್ಲದಿದ್ದರೆ, ಈ ಅನುಕೂಲವು ನಾಳೆ ಪ್ರತಿಕೂಲವಾಗಬಹುದು. ಸಮಾಜದಲ್ಲಿ ಸ್ಥಾನಮಾನ, ಪ್ರತಿಷ್ಠೆ ಮತ್ತು ನಂಬಿಕೆ ಇದೆ. ಇದು ವ್ಯಕ್ತಿಯ ಹಾಗೂ ಸಂಸ್ಥೆಯ ಅಹಂಕಾರವನ್ನು ಹೆಚ್ಚಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ: ಅಗ್ನಿವೀರ್ ವಿರುದ್ಧ 'ರೋಷಾಗ್ನಿ' : ದೇಶದ ಹಲವೆಡೆ ಪ್ರತಿಭಟನೆ - ರೈಲುಗಳಿಗೆ ಬೆಂಕಿ

ABOUT THE AUTHOR

...view details