ಥಾಣೆ(ಮಹಾರಾಷ್ಟ್ರ) :ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಳ್ಳುವ ಸರಕು ಮತ್ತು ಸೇವಾ ತೆರಿಗೆ(GST)ಯನ್ನ ಯಾವುದೇ ಕಾರಣಕ್ಕೂ ಕಟ್ಟಬೇಡಿ ಎಂದು ವ್ಯಾಪಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹೋದರ ಮನವಿ ಮಾಡಿದ್ದಾರೆ.
ಈ ನಿರ್ಧಾರ ಕೈಗೊಂಡಾಗ ಮಾತ್ರ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತ್ರವಲ್ಲ, ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆಂದು ತಿಳಿಸಿದರು.
ನರೇಂದ್ರ ಮೋದಿ ಸಹೋದರನಿಂದ ವ್ಯಾಪಾರಿಗಳಿಗೆ ಮನವಿ ಉಲ್ಲಾಸನಗರದಲ್ಲಿ ವ್ಯಾಪಾರಿಗಳ ಸಂಘ ಆಯೋಜನೆ ಮಾಡಿದ್ದ ಸಮಾರಂಭವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಪ್ರಧಾನಿ ಮೋದಿ ಸಹೋದರ ಪ್ರಲ್ಹಾದ್ ಮೋದಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ವ್ಯಾಪಾರಿಗಳು ಹಾಗೂ ಗ್ರಾಹಕರಿಂದ ಪಡೆದುಕೊಳ್ಳುವ GST ಹಣ ಯಾವುದೇ ಕಾರಣಕ್ಕೂ ಕಟ್ಟಬಾರದು. ಇದರಿಂದ ಅವರಿಗೆ ಇನ್ನಿಲ್ಲಿದ ಹೊರೆಯಾಗುತ್ತಿದೆ ಎಂದಿದ್ದಾರೆ.
ಆಲ್ ಇಂಡಿಯಾ ಫೇರ್ ಶಾಪ್ ಅಸೋಷಿಯೇಷನ್ ಉಪಾಧ್ಯಕ್ಷರು ಆಗಿರುವ ಪ್ರಲ್ಹಾದ್ ಮೋದಿ, ಒಪನ್ ಮಾರುಕಟ್ಟೆಯ ಪ್ರಕಾರವೇ ನಾವು ವ್ಯಾಪಾರ ನಡೆಸಬೇಕು. ಆದರೆ, ಸದ್ಯ ಬೇಡಿಕೊಂಡು ವ್ಯಾಪಾರ ನಡೆಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ವ್ಯಾಪಾರಿಗಳ ವಿರುದ್ಧ ಜಾರಿಗೊಂಡಿರುವ ಎಲ್ಲ ಕಠಿಣ ಕ್ರಮ ತಕ್ಷಣವೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂಪಡೆದುಕೊಳ್ಳಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ಉಲ್ಲಾಸನಗರದಲ್ಲಿ ವ್ಯಾಪಾರ ನಡೆಸಿರುವ ಎಲ್ಲ ವ್ಯಾಪಾರಿಗಳ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಈ ಸಂದರ್ಭದಲ್ಲಿ ಬೇರೆ ರಾಜ್ಯಗಳಲ್ಲಿ ವ್ಯಾಪಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆದುಕೊಳ್ಳಲಾಗಿದ್ದು, ಮಹಾರಾಷ್ಟ್ರ ಸರ್ಕಾರ ಕೂಡ ಇಂತಹ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿರಿ: FM ನಿರ್ಮಲಾ ಸೀತಾರಾಮನ್ ಭೇಟಿಯಾದ ಸಿಎಂ ಬೊಮ್ಮಾಯಿ: GST ಪರಿಹಾರ ಬಿಡುಗಡೆಗೆ ಮನವಿ
ಇದೇ ಸಂದರ್ಭದಲ್ಲಿ ದೇಶದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದೆ. ಆದರೆ, ನಮ್ಮಲ್ಲಿ ಮಾತ್ರ ಪ್ರತಿದಿನ ಏರಿಕೆ ಕಂಡು ಬರುತ್ತಿದೆ ಎಂದರು.