ನವದೆಹಲಿ: ದೇಶಾದ್ಯಂತ ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ದೆಹಲಿ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಜನರಿಗೆ ಸಲಹೆ ನೀಡಿದ್ದಾರೆ.
ಒಮಿಕ್ರಾನ್ ಕುರಿತು ಭಯ ಬೇಡ ಆದರೆ ಜಾಗರೂಕರಾಗಿರಿ: ಡಾ.ರಂದೀಪ್ ಗುಲೇರಿಯಾ
ಕೊರೊನಾ ರೂಪಾಂತರಿ ತಳಿ ಕುರಿತು ಭಯ ಪಡಬೇಡಿ, ಆದರೆ ಜಾಗರೂಕರಾಗಿರಿ ಎಂದು ಎಐಐಎಂಎಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಸಲಹೆ ನೀಡಿದ್ದಾರೆ.
ದೆಹಲಿಯ ಎಐಐಎಂಎಸ್ ಪೋಸ್ಟ್ ಮಾಡಿದ ವಿಡಿಯೋ ಸಂದೇಶದಲ್ಲಿ ಹೊಸ ವರ್ಷ ಹಾಗೂ ಒಮಿಕ್ರಾನ್ ಸೋಂಕಿನ ಕುರಿತು ಮಾಹಿತಿ ನೀಡದ್ದಾರೆ. "2022 ಎಲ್ಲರಿಗೂ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ತಂದು ಕೊಡಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೊರೊನಾ ರೂಪಾಂತರಿ ತಳಿ ಕುರಿತು ಭಯ ಪಡಬೇಡಿ, ಆದರೆ ಜಾಗರೂಕರಾಗಿರಿ" ಎಂದಿದ್ದಾರೆ.
ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಜೊತೆಗೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಜನಸಂದಣಿಯನ್ನು ತಪ್ಪಿಸುವ ಮೂಲಕ ಕೋವಿಡ್ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು. ಕೋವಿಡ್ 3 ನೇ ಅಲೆ ಎದುರಿಸಲು ದೇಶ ಸಿದ್ಧವಾಗಿದೆ. ಹಾಗಾಗಿ ಯಾರೂ ಭಯಪಡಬೇಡಿ, ಆದರೆ ನೀವು ಜಾಗರೂಕರಾಗಿರಬೇಕು ಎಂದು ತಿಳಿಸಿದ್ದಾರೆ.