ನವದೆಹಲಿ: ಸೌತ್ ಬ್ಲಾಕ್ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನಾದಿನದಂದು ಹಲವಾರು ಮಹಿಳಾ ಸೇನಾ ಅಧಿಕಾರಿಗಳು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ, ತಮ್ಮ ಅನೇಕ ಸಾಧನೆಗಳನ್ನು ಸಾಧಿಸುವ ಪ್ರಯಾಣದಲ್ಲಿ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡರು. 15 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಕರ್ನಲ್ ಅನಿಲಾ ಖಾತ್ರಿ ಅವರು ಸ್ಕೈಡೈವಿಂಗ್‌ನಲ್ಲಿ ಡೆಮೊ - ಜಂಪರ್ ಆಗಿ ಅರ್ಹತೆ ಪಡೆದ ಭಾರತೀಯ ಸೇನೆಯ ಏಕೈಕ ಮಹಿಳಾ ಅಧಿಕಾರಿಯಾಗಿದ್ದಾರೆ.
ಸಶಸ್ತ್ರ ಪಡೆಗೆ ಸೇರಲು ಮಹಿಳೆಯರು ‘ದೈಹಿಕವಾಗಿ ದುರ್ಬಲರು’ ಎಂಬ ಪರಿಕಲ್ಪನೆಯ ಬಗ್ಗೆ ಮಾತನಾಡುತ್ತಾ, ಮಹಿಳೆಯರು ತಮ್ಮನ್ನು ತಾವು ಪುರುಷರಿಗಿಂತ ಸಮಾನರು ಅಥವಾ ಉತ್ತಮರು ಎಂದು ಸಾಬೀತುಪಡಿಸುವ ಹೊರೆಯನ್ನು ಯಾವಾಗಲೂ ಹೊತ್ತುಕೊಳ್ಳಬೇಕಾಗಿಲ್ಲ. ತಮ್ಮ ಮಿತಿಗಳನ್ನು ತಾವು ತಿಳಿದಿದ್ರೆ ಮತ್ತು ತಾವು ಖಂಡಿತವಾಗಿಯೂ ಆ ಕಾರ್ಯ ಮಾಡುತ್ತೇವೆ ಎಂಬ ವಿಶ್ವಾಸ ಇದ್ರೆ ಸಾಕು. ಮಹಿಳೆಯರು ಕೇವಲ ತಮ್ಮ ಭಾವೋದ್ರೇಕಗಳನ್ನು ಬದುಕಬೇಕು ಮತ್ತು ಅದನ್ನು ನಿಜ ಜೀವನದಲ್ಲಿ ಮಾಡಲು ಶ್ರಮಿಸಬೇಕು ಎಂದರು.
ಓದಿ:ನಾನು ಕೀವ್ನಲ್ಲಿಯೇ ಇದ್ದೇನೆ, ಅವಿತುಕೊಂಡಿಲ್ಲ: ಮತ್ತೆ ಸ್ಪಷ್ಟಪಡಿಸಿದ ಉಕ್ರೇನ್ ಅಧ್ಯಕ್ಷ
ಲೆಫ್ಟಿನೆಂಟ್ ಕರ್ನಲ್ ಖತ್ರಿ ಈಟಿವಿ ಭಾರತ್ ಜೊತೆ ಮಾತನಾಡಿ, ಭಾರತೀಯ ಸೇನೆಯಲ್ಲಿ ಲಿಂಗ ಪಕ್ಷಪಾತವಿದೆ. ನಾನು ಕೇವಲ 89 ಜಿಗಿತಗಳನ್ನು (ಸ್ಕೈಡೈವಿಂಗ್) ಮಾಡಿದ್ದೇನೆ ಮತ್ತು ನೀವು (ಮಾಧ್ಯಮ) ನನ್ನನ್ನು ಸಂದರ್ಶಿಸುತ್ತಿದ್ದೀರಿ. 3000 - 4000 ಜಿಗಿತಗಳನ್ನು ಹೊಂದಿರುವ ಪುರುಷರು ಇದ್ದಾರೆ. ಅವರು ನಮಗೆ ತರಬೇತಿ ನೀಡಿದ್ದಾರೆ. ಅವರನ್ನು ಎಂದಿಗೂ ಯಾರು ಸಂದರ್ಶಿಸಿಲ್ಲ ಎಂದರು.