ಕರ್ನಾಟಕ

karnataka

ETV Bharat / bharat

ನಿಮ್ಮನ್ನು ತಡೆಯಲು ಯಾರಿಗೂ ಬಿಡಬೇಡಿ: ಮಹಿಳೆಯರಿಗೆ ರಾಹುಲ್ ಕಿವಿಮಾತು - ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಮಹಿಳೆಯರು ಇತಿಹಾಸ ಮತ್ತು ಭವಿಷ್ಯವನ್ನು ರಚಿಸುವ ಅಸಾಧಾರಣ ಸಾಮರ್ಥ್ಯ ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Rahul Gandhi
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

By

Published : Mar 8, 2021, 10:45 AM IST

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಕೋರಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮಹಿಳಾಮಣಿಯರಿಗೆ ಕಿವಿಮಾತು ಹೇಳಿದ್ದಾರೆ.

"ಮಹಿಳೆಯರು ಇತಿಹಾಸ ಮತ್ತು ಭವಿಷ್ಯವನ್ನು ರಚಿಸುವ ಅಸಾಧಾರಣ ಸಾಮರ್ಥ್ಯ ಹೊಂದಿದ್ದಾರೆ. ನಿಮ್ಮನ್ನು ತಡೆಯಲು ಯಾರಿಗೂ ಬಿಡಬೇಡಿ" ಎಂದು ರಾಗಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಲಿಂಗ ಅಸಮಾನತೆ ತೊಡೆದುಹಾಕಲು ಸಂಕಲ್ಪ ಮಾಡೋಣ: ಮಹಿಳಾ ದಿನಾಚರಣೆಗೆ ರಾಷ್ಟ್ರಪತಿ​ ಕೋವಿಂದ್​ ಟ್ವೀಟ್​

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಕೂಡ ಮಹಿಳಾ ದಿನಾಚರಣೆಯ ಶುಭಾಶಯ ಕೋರಿ ಟ್ವೀಟ್​ ಮಾಡಿದ್ದರು.

ವಿವಿಧ ರಂಗಗಳಲ್ಲಿನ ಮಹಿಳೆಯರ ಸಾಧನೆಯನ್ನು ಗುರುತಿಸಲು, ಮಹಿಳಾ ಸಬಲೀಕರಣಕ್ಕೆ ಪುಷ್ಠಿ ನೀಡಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ.

ABOUT THE AUTHOR

...view details