ಕರ್ನಾಟಕ

karnataka

ETV Bharat / bharat

ಗೌಪ್ಯತಾ ನೀತಿ ಒಪ್ಪಲು ಆಗದಿದ್ದರೆ ವಾಟ್ಸ್​ಆ್ಯಪ್ ಬಳಸಬೇಡಿ; ದೆಹಲಿ ಹೈಕೋರ್ಟ್ - ದೆಹಲಿ ಹೈಕೋರ್ಟ್

ವಾಟ್ಸ್​​ಆ್ಯಪ್ ನೂತನ ಗೌಪ್ಯತಾ​​ ನೀತಿಗಳನ್ನು ಒಪ್ಪದಿದ್ದರೆ ಆ ಅಪ್ಲಿಕೇಶನ್​ ಅನ್ನು ಬಳಸಬೇಡಿ ಎಂದು ಅರ್ಜಿದಾರರಿಗೆ ದೆಹಲಿ ಹೈಕೋರ್ಟ್ ಸಲಹೆ ನೀಡಿದೆ.

HC
ಹೈಕೋರ್ಟ್

By

Published : Jan 18, 2021, 6:12 PM IST

ನವದೆಹಲಿ: ವಾಟ್ಸ್​ಆ್ಯಪ್​​ನ ಹೊಸ ಗೌಪ್ಯತಾ ನೀತಿ ಒಪ್ಪಿಕೊಳ್ಳುವುದು ಸ್ವಯಂಪ್ರೇರಿತ ವಿಚಾರ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ನಿಯಮಗಳನ್ನು ಒಪ್ಪಲು ಸಾಧ್ಯವಾಗದಿದ್ದರೆ ಆ ಆ್ಯಪ್​​ ಬಳಸಬೇಡಿ ಎಂದು ಸಲಹೆಯನ್ನೂ ನೀಡಿದೆ.

​​ವಾಟ್ಸ್​ಆ್ಯಪ್​ನ ಗೌಪ್ಯತಾ ನೀತಿ ಪ್ರಶ್ನಿಸಿ ವಕೀಲರೊಬ್ಬರು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಂಜೀವ್ ಸಚ್​ದೇವ, ವಾಟ್ಸ್​ಆ್ಯಪ್​​ ಖಾಸಗಿ ಆ್ಯಪ್ ಆಗಿದೆ. ಅದರ ಗೌಪ್ಯತಾ ನೀತಿಗಳನ್ನು ಒಪ್ಪಿಕೊಳ್ಳುವುದು, ಬಿಡುವುದು ಬಳಕೆದಾರರಿಗೆ ಬಿಟ್ಟ ವಿಚಾರ. ಮೊಬೈಲ್ ಅಪ್ಲಿಕೇಶನ್​ಗಳ ನಿಯಮ ಮತ್ತು ಷರತ್ತುಗಳನ್ನು ಓದಿದರೆ ನೀವು ಯಾವುದಕ್ಕೆ ಒಪ್ಪಿದ್ದೀರಿ ಎಂದು ನಿಮಗೆ ಆಶ್ವರ್ಯವಾಗುತ್ತದೆ. ಕೇವಲ ವಾಟ್ಸ್​ಆ್ಯಪ್​ ಮಾತ್ರವಲ್ಲ, ಗೂಗಲ್ ಮ್ಯಾಪ್​​ ಕೂಡ ನಿಮ್ಮ ಎಲ್ಲಾ ಡೇಟಾ ಸಂಗ್ರಹಿಸುತ್ತದೆ ಎಂದು ಅರ್ಜಿದಾರರಿಗೆ ತಿಳಿಸಿದ್ದಾರೆ.

ಹೊಸ ನೀತಿಯು ಸಂವಿಧಾನದ ಅಡಿಯಲ್ಲಿ ಬಳಕೆದಾರರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಕೀಲರ ಅರ್ಜಿಯಲ್ಲಿ ನಮೂದಿಸಲಾಗಿದೆ.

ವಾಟ್ಸ್​ಆ್ಯಪ್​ ಮತ್ತು ಫೇಸ್​ಬುಕ್​​​​​ ಸಂಸ್ಥೆಗಳ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಮುಕುಲ್ ರೋಹ್ಟಗಿ, ಈ ಅರ್ಜಿಯಲ್ಲಿನ ಅಂಶಗಳು ನಿರಾಧಾರವಾಗಿದ್ದು, ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಕುಟುಂಬ ಮತ್ತು ಸ್ನೇಹಿತರ ನಡುವಿನ ಖಾಸಗಿ ಚಾಟ್​ಗಳು ಎನ್‌ಕ್ರಿಪ್ಟ್ ಆಗಿರುತ್ತದೆ. ಅದನ್ನು ವಾಟ್ಸ್​ಆ್ಯಪ್ ಸಂಗ್ರಹಿಸಲಾಗುವುದಿಲ್ಲ ಮತ್ತು ಹೊಸ ನೀತಿಯಡಿಯಲ್ಲಿ ಈ ನಿಯಮವು ಬದಲಾಗುವುದಿಲ್ಲ ಎಂದು ಅವರು ಕೋರ್ಟ್​ಗೆ ತಿಳಿಸಿದರು. ನೀತಿಯ ಬದಲಾವಣೆಯು ವಾಟ್ಸ್​ಆ್ಯಪ್​​ನಲ್ಲಿನ ವ್ಯವಹಾರ ಚಾಟ್‌ಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟನೆ ನೀಡಿದರು.

ABOUT THE AUTHOR

...view details