ಡಾರ್ಜಿಲಿಂಗ್(ಬಂಗಾಳ): ಯಾವುದೇ ದುರಾಸೆಯ ನಾಯಕರಿಗೆ ಬೆಟ್ಟಗಳಲ್ಲಿ ಅಶಾಂತಿ ಉಂಟುಮಾಡಲು ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ದೂಷಿಸಿದ್ದಾರೆ.
ಜಿಟಿಎ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಲೆನಾಡಿನ ಜನತೆಗೆ ಈ ಸಂದೇಶ ರವಾನಿಸಿದ್ದಾರೆ. ಬೆಟ್ಟವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದರೂ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ದೂರಿದ್ದಾರೆ. ಮಲೆನಾಡಿನಲ್ಲಿ ಇಷ್ಟು ಶಾಂತಿಯುತ ನಡೆದ ಚುನಾವಣೆಯನ್ನು ನಾನು ಎಲ್ಲೂ ನೋಡಿಲ್ಲ. ಗುಡ್ಡಗಾಡು ಜನರು ಏನು ಮಾಡಬಹುದು ಎಂಬುದನ್ನು ಎಲ್ಲರಿಗೂ ತೋರಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು ಮತ್ತು ಶುಭಾಶಯಗಳು ಎಂದಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ನಾನು ಇಲ್ಲಿನ ಅಭಿವೃದ್ಧಿಗಾಗಿ 7,000 ಕೋಟಿ ರೂ. ನೀಡಿದ್ದೇನೆ. ಆದರೆ, ಯಾವುದೇ ಕೆಲಸ ಸರಿಯಾಗಿ ಆಗಿಲ್ಲ. ಕಳೆದ ಜಿಟಿಎ ಚುನಾವಣೆ 10 ವರ್ಷಗಳ ಹಿಂದೆ ಜರುಗಿತ್ತು. ನಂತರ ಗೂರ್ಖಾ ಜನಮುಕ್ತಿ ಮೋರ್ಚಾದ ಬಿಮಲ್ ಗುರುಂಗ್ ವಿಜೇತರಾಗಿ ಹೊರಹೊಮ್ಮಿದ್ದರು.
ಅವರ ನಾಯಕತ್ವದಲ್ಲಿ ಮೋರ್ಚಾವು ಜಿಟಿಎಯಲ್ಲಿ ಮಂಡಳಿಯನ್ನು ರಚಿಸಿತ್ತು ಮತ್ತು ಬಿಮಲ್ ಗುರುಂಗ್ ರಾಜ್ಯದೊಂದಿಗೆ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಅಂದರೆ 2017 ರಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆಯ ಸಶಸ್ತ್ರ ಚಳವಳಿ ಪ್ರದೇಶದಾದ್ಯಂತ ಅಶಾಂತಿ ಹರಡಿದೆ.