ನವದೆಹಲಿ: ಸದ್ಯ ವಿಧಿಸಲಾಗಿರುವ ದೇಶೀಯ ವಿಮಾನಯಾನದ ಕನಿಷ್ಠ ಹಾಗೂ ಗರಿಷ್ಠ ಪ್ರಯಾಣ ದರಗಳ ಮಿತಿಗಳು ಮಾರ್ಚ್ 31ರವರೆಗೆ ಜಾರಿಯಲ್ಲಿ ಇರುತ್ತವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ವಿಮಾನ ಪ್ರಯಾಣದ ಅವಧಿಯನ್ನು ಆಧರಿಸಿ ಮೇ 21, 2020ರಂದು ಏಳು ಹಂತಗಳಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಈ ಮಿತಿಗಳನ್ನು ವಿಧಿಸಿತ್ತು. ನಂತರ ಅವುಗಳನ್ನು ನವೆಂಬರ್ 24ರವರೆಗೆ, ಬಳಿಕ ಫೆಬ್ರವರಿ 24, 2021ರವರೆಗೆ ವಿಸ್ತರಿಸಲಾಗಿತ್ತು.
ದೇಶೀಯ ವಿಮಾನಯಾನ ಶುಲ್ಕ ಮಿತಿ ಮಾ.31ರವರೆಗೆ ವಿಸ್ತರಣೆ
ದೇಶದಲ್ಲಿ ಕೊರೊನಾ ವೈರಸ್ ಲಾಕ್ಡೌನ್ ಬಳಿಕ ಅಮಾನತುಗೊಂಡಿದ್ದ ದೇಶೀಯ ವಿಮಾನ ಸೇವೆ ಸುಮಾರು ಎರಡು ತಿಂಗಳ ನಂತರ 2020ರ ಮೇ 25ರಂದು ಪುನಾರಂಭಗೊಂಡಿತ್ತು. ಆಗ ವಿಮಾನಯಾನ ಶುಲ್ಕ ಆಕರಣೆಗೆ ಏಳು ಹಂತಗಳಲ್ಲಿ ಕನಿಷ್ಠ ಹಾಗೂ ಗರಿಷ್ಠ ದರಗಳನ್ನು ವಿಧಿಸಿ ಡಿಜಿಸಿಎ ಆದೇಶ ಹೊರಡಿಸಿತ್ತು.
ಈಗ ಮತ್ತೊಮ್ಮೆ ದೇಶೀಯ ಹಾರಾಟದ ವಿಮಾನ ಯಾನ ದರಗಳ ಮಿತಿಯನ್ನು ಮಾರ್ಚ್ 31, 2021ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿಮಾನ ಯಾನ ಸಂಸ್ಥೆಗಳು ತಮ್ಮ ಪ್ರತಿ ವಿಮಾನ ಹಾರಾಟದ ಕನಿಷ್ಠ ಹಾಗೂ ಗರಿಷ್ಠ ಪ್ರಯಾಣ ಶುಲ್ಕದ ಸರಾಸರಿಯ ಮಧ್ಯದ ಕೆಳಗಿನ ಕನಿಷ್ಠ ಶೇ 20 ರಷ್ಟು ಸೀಟುಗಳನ್ನು ಮಾರಾಟ ಮಾಡುವುದು ಕಡ್ಡಾಯ ಎಂದೂ ಪ್ರಕಟಣೆ ತಿಳಿಸಿದೆ.