ಖೋರ್ಧಾ (ಒಡಿಶಾ):ಒಡಿಶಾದ ಖೋರ್ಧಾ ಜಿಲ್ಲೆಯಲ್ಲಿರುವ ಚಿಲಿಕಾ ಸರೋವರದಲ್ಲಿ ಇಂದು ಬೆಳಗ್ಗೆಯಿಂದ ಡಾಲ್ಫಿನ್ ಗಣತಿ ಶುರುವಾಗಿದೆ. ಈ ಎಣಿಕೆಯು ಬಲುಗಾಂವ್ ವನ್ಯಜೀವಿ ವಿಭಾಗ ಮತ್ತು ಚಿಲಿಕಾದ ಬಲುಗಾಂವ್ ಶ್ರೇಣಿಯಲ್ಲಿ ನಡೆಯುತ್ತದೆ.
ಈ 2 ಶ್ರೇಣಿಗಳನ್ನು 3 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ತಂಡದಲ್ಲಿ 4 ಸದಸ್ಯರಂತೆ ಒಟ್ಟು 16 ತಂಡಗಳು ಡಾಲ್ಫಿನ್ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿವೆ. ಈ ತಂಡಗಳಲ್ಲಿ ಸಿಡಿಎ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಡಾಲ್ಫಿನ್ ತಜ್ಞರು, ಸ್ವಯಂಸೇವಕರು ಮತ್ತು ಪರಿಸರವಾದಿಗಳು ಸೇರಿದಂತೆ ಅನೇಕ ಬೋಟರ್‌ಗಳು ಇದ್ದಾರೆ. ಜಿಪಿಎಸ್, ಬೈನಾಕ್ಯುಲರ್, ರೇಂಜ್ ಫೈಂಡರ್ ಮೂಲಕ ಎಣಿಕೆ ನಡೆಸಲಾಗುತ್ತದೆ.