ಕರ್ನಾಟಕ

karnataka

ETV Bharat / bharat

‘ದೋಹಾ’ ಮಾತುಕತೆ ಅಂತ್ಯ.. ಅಫ್ಘಾನ್​ನಲ್ಲಿ ಶಾಂತಿ ನೆಲೆಸಲು ಕ್ರಮಕೈಗೊಳ್ಳಲು ಅಮೆರಿಕ, ಭಾರತ ಕರೆ.. - ಕತಾರ್ ಮಾತುಕತೆ

ಆಗಸ್ಟ್ ಅಂತ್ಯದ ವೇಳೆಗೆ ಅಮೆರಿಕ ಸೈನ್ಯವು ಅಫ್ಘಾನಿಸ್ತಾನವನ್ನು ತೊರೆಯಲಿದ್ದು, ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ತಾಲಿಬಾನ್ ವೇಗ ಪಡೆದುಕೊಂಡಿದೆ. ದೇಶದ ಮೂರನೇ ಎರಡರಷ್ಟು ಭಾಗವನ್ನು ತಾಲಿಬಾನ್​ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಶುಕ್ರವಾರ, ಅಫ್ಘಾನ್​​ನ ಎರಡು ದೊಡ್ಡ ನಗರಗಳಾದ ಕಂದಹಾರ್ ಮತ್ತು ಹೆರಾತ್ ಅನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್ ಈಗ ಲೋಗರ್ ಪ್ರಾಂತ್ಯವನ್ನೂ ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದೆ..

ದೋಹಾ
ದೋಹಾ

By

Published : Aug 13, 2021, 6:44 PM IST

ನವದೆಹಲಿ :ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ತಾಲಿಬಾನ್​ ಜತೆ ಅಮೆರಿಕ, ಭಾರತ, ಪಾಕಿಸ್ತಾನ, ಟರ್ಕಿ ಮತ್ತು ಇತರ ರಾಯಭಾರಿಗಳು ಮಾತುಕತೆ ನಡೆಸಿದರು. ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಇರಾನ್, ಪಾಕಿಸ್ತಾನ, ಅಫ್ಘಾನಿಸ್ತಾನ) ಜಂಟಿ ಕಾರ್ಯದರ್ಶಿ ಜೆ ಪಿ ಸಿಂಗ್ ಭಾಗಿಯಾಗಿದ್ದರು.

ಕತಾರ್​​ನಲ್ಲಿ ನಡೆದ ಮಾತುಕತೆಯ ನಂತರ ಅಂತಿಮ ಹೇಳಿಕೆ ಬಿಡುಗಡೆ ಮಾಡಲಾಗಿದೆ. ವಿವಿಧ ದೇಶಗಳ ರಾಯಭಾರಿಗಳು, ಅಫ್ಘಾನ್ ಸರ್ಕಾರದ ನಾಯಕರು ಮತ್ತು ತಾಲಿಬಾನ್​ ಪ್ರತಿನಿಧಿಗಳ ನೇತೃತ್ವದಲ್ಲಿ ಮಾತುಕತೆ ನಡೆಯಿತು. ತಾಲಿಬಾನ್-ಅಘ್ಘಾನ್ ಸರ್ಕಾರ ಮಾತುಕತೆ ಮೂಲಕ ಹಿಂಸಾಚಾರವನ್ನು ಹತ್ತಿಕ್ಕುವಂತೆ ರಾಯಭಾರಿಗಳು ಒತ್ತಾಯಿಸಿದರು.

ಪ್ರಸ್ತುತ ಸವಾಲುಗಳು ಮತ್ತು ಅವಕಾಶಗಳ ಕುರಿತು ಸಂಧಾನ ತಂಡಗಳು ಅಭಿಪ್ರಾಯ ಹಂಚಿಕೊಂಡರು. ಜತೆಗೆ ಶಾಂತಿ ಸ್ಥಾಪಿಸಲು ಅಂತಾರಾಷ್ಟ್ರೀಯ ಸಮುದಾಯ ನೀಡಬಹುದಾದ ಕೊಡುಗೆಗಳ ಬಗ್ಗೆಯೂ ಪ್ರಸ್ತಾಪಿಸಿದರು.

ಆದರೂ, ಈ ಚರ್ಚೆಯಲ್ಲಿ ಯಾವುದೇ ಪ್ರಮುಖ ಬೆಳವಣಿಗೆಗಳನ್ನು ಕಾಣಲಿಲ್ಲ. ಯುದ್ಧಪೀಡಿತ ದೇಶದಲ್ಲಿ ಹಿಂಸಾಚಾರ ಕೊನೆಗೊಳಿಸುವ ಗಡುವು, ಸಹಾಯಕ್ಕಾಗಿ ಯಾವುದೇ ನಿರ್ದಿಷ್ಟ ಯೋಜನೆಗಳ ಬಗ್ಗೆ ಉಲ್ಲೇಖಿಸಿಲ್ಲ. ರಾಯಭಾರಿಗಳು ಮತ್ತು ಪ್ರತಿನಿಧಿಗಳು ಅಫ್ಘಾನಿಸ್ತಾನದ ಪ್ರಾಂತೀಯ ರಾಜಧಾನಿಗಳು ಮತ್ತು ಇತರ ನಗರಗಳಲ್ಲಿ ತಕ್ಷಣವೇ ಹಿಂಸಾಚಾರ ನಿಲ್ಲಿಸುವಂತೆ ಕರೆ ನೀಡಿದರು.

ಆಗಸ್ಟ್ ಅಂತ್ಯದ ವೇಳೆಗೆ ಅಮೆರಿಕ ಸೈನ್ಯವು ಅಫ್ಘಾನಿಸ್ತಾನವನ್ನು ತೊರೆಯಲಿದ್ದು, ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ತಾಲಿಬಾನ್ ವೇಗ ಪಡೆದುಕೊಂಡಿದೆ. ದೇಶದ ಮೂರನೇ ಎರಡರಷ್ಟು ಭಾಗವನ್ನು ತಾಲಿಬಾನ್​ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಶುಕ್ರವಾರ, ಅಫ್ಘಾನ್​​ನ ಎರಡು ದೊಡ್ಡ ನಗರಗಳಾದ ಕಂದಹಾರ್ ಮತ್ತು ಹೆರಾತ್ ಅನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್ ಈಗ ಲೋಗರ್ ಪ್ರಾಂತ್ಯವನ್ನೂ ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದೆ.

ಇದನ್ನೂ ಓದಿ: ಮತ್ತೆ ತಾಲಿಬಾನ್​ ಹಿಡಿತಕ್ಕೆ ಹೋಗುತ್ತಾ ಅಫ್ಘಾನಿಸ್ತಾನ: 2ನೇ ಅತಿದೊಡ್ಡ ನಗರ ಕಂದಹಾರ್ ಉಗ್ರರ ವಶಕ್ಕೆ!

ABOUT THE AUTHOR

...view details