ಕರ್ನಾಟಕ

karnataka

ETV Bharat / bharat

ಶ್ವಾನ ಜೋಡಿಗೆ ಹಿಂದೂ ಸಂಪ್ರದಾಯದಂತೆ ಮದುವೆ.. ಮಕ್ಕಳಿಗಾಗಿ ಹರಕೆ ಹೊತ್ತ ದಂಪತಿ ನಡೆಸಿತು ವಿವಾಹ - ಶ್ವಾನಗಳಿಗೆ ಮದುವೆ ಮಾಡಿಸಿದ ಮೋತಿಹಾರಿ ಜನ

ಬಿಹಾರದ ಮೋತಿಹಾರಿಯಲ್ಲಿ ವಿಶಿಷ್ಟ ಮದುವೆಯೊಂದು ನಡೆದಿದೆ. ಇಲ್ಲಿನ ಜನ ಶ್ವಾನ ಜೋಡಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿದ್ದಾರೆ. ಈ ಮದುವೆಯನ್ನು ನೋಡಿದ ಜನರು ತುಂಬಾ ಆಶ್ಚರ್ಯಪಟ್ಟರು. ಈ ವಿಶಿಷ್ಟ ಮದುವೆ ಬಗ್ಗೆ ತಿಳಿಯೋಣ ಬನ್ನಿ.

DOGS WEDDING IN Bihar  Dogs Wedding In Motihari  Unique Marriage In Motihari  ಬಿಹಾರದಲ್ಲಿ ಶ್ವಾನ ಜೋಡಿಗೆ ಹಿಂದೂ ಸಂಪ್ರದಾಯದಂತೆ ಮದುವೆ  ಮೋತಿಹಾರಿಯಲ್ಲಿ ವಿಶಿಷ್ಟ ಮದುವೆ  ಶ್ವಾನಗಳಿಗೆ ಮದುವೆ ಮಾಡಿಸಿದ ಮೋತಿಹಾರಿ ಜನ  ಬಿಹಾರ ಸುದ್ದಿ
ಶ್ವಾನ ಜೋಡಿಗೆ ಹಿಂದೂ ಸಂಪ್ರದಾಯಂತೆ ಮದುವೆ

By

Published : Jun 22, 2022, 8:02 AM IST

Updated : Jun 22, 2022, 9:11 AM IST

ಪೂರ್ವ ಚಂಪಾರಣ್( ಬಿಹಾರ):ಜಿಲ್ಲಾ ಕೇಂದ್ರವಾದ ಮೋತಿಹಾರಿ ನಗರದ ಪಕ್ಕದಲ್ಲಿರುವ ಮಜುರಹಾನ್ ಗ್ರಾಮದಲ್ಲಿ ವಿಶಿಷ್ಟ ವಿವಾಹವೊಂದು ನಡೆದಿದೆ. ಗ್ರಾಮದಲ್ಲಿ ಶ್ವಾನ ಜೋಡಿಗೆ ಮದುವೆ ಮಾಡಿಸಲಾಗಿದೆ . ಈ ಮದುವೆ ಸಂಪೂರ್ಣ ಹಿಂದೂ ಸಂಪ್ರದಾಯದಂತೆ ನಡೆದಿರುವುದು ವಿಶೇಷ.

ಬಿಹಾರದ ಮೋತಿಹಾರಿಯಲ್ಲಿ ವಿಶಿಷ್ಟ ಮದುವೆ

ಶ್ವಾನ ಜೋಡಿಗೆ ಮದುವೆ:ಮದುವೆಯಾದ ನಾಯಿಯ ಹೆಸರು ಕೊಲ್ಹು ಮತ್ತು ಹೆಣ್ಣು ನಾಯಿಯ ಹೆಸರು ವಸಂತಿ. ಕೊಲ್ಹು ಮತ್ತು ವಸಂತಿ ಮಾಲೀಕರಾದ ನರೇಶ್ ಸಾಹ್ನಿ ಮತ್ತು ಪ್ರೇಯಸಿ ಸವಿತಾ ದೇವಿ ಅವರು ಕುಲದೇವತೆಗೆ ಪೂಜೆ ಸಲ್ಲಿಸಿದ ನಂತರ ಸಾಂಪ್ರದಾಯಿಕ ಮಾಂಗ್ಲಿಕ್ ಹಾಡುಗಳೊಂದಿಗೆ ಅರಿಶಿಣ ಸಮಾರಂಭ ನಡೆಯಿತು. ಈ ವೇಳೆ, ಗ್ರಾಮದ ಮಹಿಳೆಯರು ಕುಣಿದು ಕುಪ್ಪಳಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ಬಿಹಾರದ ಮೋತಿಹಾರಿಯಲ್ಲಿ ವಿಶಿಷ್ಟ ಮದುವೆ

ಹಿಂದೂ ಸಂಪ್ರದಾಯದಂತೆ ಮದುವೆ: ಗ್ರಾಮದಲ್ಲಿ ಶ್ವಾನ ಜೋಡಿಯ ಮದುವೆ ಸಂಭ್ರಮದಿಂದ ನಡೆಯಿತು. ಈ ಮದುವೆಗೆ ಡಿಜೆ ಸಹ ಏರ್ಪಡಿಸಲಾಗಿದ್ದು, ಜನರು ಡಿಜೆ ಸೌಂಡ್​ಗೆ ಕುಣಿದು ಕುಪ್ಪಳಿಸುತ್ತಾ ನಗರದಲ್ಲಿ ಮೆರವಣಿಗೆ ನಡೆಯಿತು. ಬಳಿಕ ಸಂಪೂರ್ಣ ವಿಧಿ ವಿಧಾನಗಳ ಪ್ರಕಾರ ಹಿಂದೂ ಸಂಪ್ರದಾಯದಂತೆ ಪಂಡಿತರು ಸಿಂಧೂರವನ್ನು ದಾನ ಮಾಡುವ ಮೂಲಕ ಶ್ವಾನ ಜೋಡಿಗೆ ಮದುವೆ ಮಾಡಿಸಿದರು.

ಓದಿ:ಹುಲಿಗಳ ಹಿಂಡಿನ ಮಧ್ಯೆ ಶ್ವಾನದ ರಾಜಾರೋಷ ಹೇಗಿದೆ ನೋಡಿ!

ಭರ್ಜರಿ ಭೋಜನ: ಮದುವೆಗೆ ಬಂದ ಜನರ ಭೋಜನ ಕೂಟಕ್ಕೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲು ಅಡುಗೆಯವರನ್ನೂ ನೇಮಕ ಮಾಡಲಾಗಿತ್ತು. ಈ ವಿಶಿಷ್ಟ ಮದುವೆಯ ಬಳಿಕ ರುಚಿಕರ ಖಾದ್ಯಗಳನ್ನು ಸವಿದ ಜನರು ಶ್ವಾನ ಜೋಡಿಗೆ ಆಶೀರ್ವದಿಸಿದರು. ಗ್ರಾಮದ ಸುಮಾರು ನಾನೂರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡು ಈ ವಿಶಿಷ್ಟ ವಿವಾಹಕ್ಕೆ ಸಾಕ್ಷಿಯಾದರು.

ಬಿಹಾರದ ಮೋತಿಹಾರಿಯಲ್ಲಿ ವಿಶಿಷ್ಟ ಮದುವೆ

ಹರಕೆ ತೀರಿಸಿದ ದಂಪತಿ: ನರೇಶ್ ಸಾಹ್ನಿ ಮತ್ತು ಅವರ ಪತ್ನಿ ಸವಿತಾ ದೇವಿ ಮಜುರಹಾನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರು ಎರಡು ಶ್ವಾನಗಳನ್ನು ಸಾಕುತ್ತಿದ್ದಾರೆ. ಗಂಡು ನಾಯಿಗೆ ಕೊಲ್ಹು ಮತ್ತು ಹೆಣ್ಣು ನಾಯಿಗೆ ವಸಂತಿ ಎಂದು ಹೆಸರಿಟ್ಟಿದ್ದಾರೆ. ಸವಿತಾ ದೇವಿ ತಮ್ಮ ಮಕ್ಕಳಿಗಾಗಿ ಹರಿಕೆ ಹೊತ್ತಿದ್ದರು. ಆ ಹರಕೆ ಪೂರ್ಣಗೊಂಡಿದೆ. ಅದಕ್ಕಾಗಿಯೇ ಅವರ ಕುಟುಂಬದವರು ಕೊಲ್ಹು ಮತ್ತು ವಸಂತಿಯ ವಿವಾಹವನ್ನು ಮಾಡಿದ್ದಾರೆ.

ಬಿಹಾರದ ಮೋತಿಹಾರಿಯಲ್ಲಿ ವಿಶಿಷ್ಟ ಮದುವೆ

ಎಲ್ಲೆಲ್ಲೂ ಮದುವೆ ಚರ್ಚೆ:ಗ್ರಾಮಸ್ಥರು ಹೇಳುವ ಪ್ರಕಾರ ಇಲ್ಲಿಯವರೆಗೂ ಇಂತಹ ಮದುವೆ ಕಂಡಿಲ್ಲ. ಈ ಮದುವೆಯನ್ನು ಪಂಡಿತರು ಸಂಪೂರ್ಣ ಹಿಂದೂ ಸಂಪ್ರದಾಯದಂತೆ ಮಂತ್ರಪಠಣ ಬೋಧಿಸುವ ಮೂಲಕ ಮದುವೆಯನ್ನು ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಮಾತಾಗಿದೆ.

Last Updated : Jun 22, 2022, 9:11 AM IST

ABOUT THE AUTHOR

...view details