ಜೋಗುಲಾಂಬ ಗದ್ವಾಲ(ಆಂಧ್ರ ಪ್ರದೇಶ) :ಭವಾನಿ ಮಾತಾ ಉತ್ಸವದ ನಿಮಿತ್ತ ಜೋಗುಲಾಂಬ ಗದ್ವಾಲ ಜಿಲ್ಲೆಯ ಗತ್ತು ಎಂಬಲ್ಲಿ ಶ್ವಾನಗಳ ಓಟದ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಶ್ವಾನಗಳು ಓಟದಲ್ಲಿ ಭಾಗವಹಿಸಿದ್ದವು. ಒಂದು ಕಿಲೋಮೀಟರ್ ಶ್ವಾನ ಓಟ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ನಾಯಿಗಳು ಭಾಗವಹಿಸಿದ್ದವು.
ಭವಾನಿ ಮಾತಾ ಉತ್ಸವ: ಜನರ ಮನರಂಜನೆಯ ಕೇಂದ್ರವಾದ ಶ್ವಾನಗಳ ರನ್ನಿಂಗ್ ರೇಸ್ - ಈಟಿವಿ ಭಾರತ ಕನ್ನಡ
ಜೋಗುಲಾಂಬ ಗದ್ವಾಲ ಜಿಲ್ಲೆಯ ಭವಾನಿ ಮಾತಾ ಉತ್ಸವದ ನಿಮಿತ್ತ ವಿಶೇಷ ಶ್ವಾನ ಓಟದ ಸ್ಪರ್ಧೆಯನ್ನು ನಡೆಸಲಾಯಿತು.
ಶ್ವಾನಗಳ ರನ್ನಿಂಗ್ ರೇಸ್
ಜೆಸ್ಸಿ ಬಾಯಿ (ಆಂಧ್ರ), ದೇವರಾಜು ಲಬಂಡಾ (ಕರ್ನಾಟಕ), ರಾಣಿ ರಾಯಚೂರು (ಕರ್ನಾಟಕ) ಮತ್ತು ವೆಂಕಟೇಶ (ಆಂಧ್ರ) ಶ್ವಾನಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಮತ್ತು ನಾಲ್ಕನೇ ಬಹುಮಾನಕ್ಕೆ ಆಯ್ಕೆಯಾದವು. ಆಯ್ಕೆಯಾದ ಶ್ವಾನಗಳಿಗೆ ರೂ.18, 16, 14 ಸಾವಿರ ಹಾಗೂ 12 ಸಾವಿರ ರೂ.ಗಳ ಬಹುಮಾನ ನೀಡಲಾಯಿತು.
ಇದನ್ನೂ ಓದಿ :ಕೊಮರಂ ಭೀಮ್ನಲ್ಲಿ ಬೆಳೆ ಕಾಯುತ್ತಿದ್ದ ರೈತನ ಮೇಲೆ ಹುಲಿ ದಾಳಿ: ವ್ಯಕ್ತಿ ಸಾವು
Last Updated : Nov 16, 2022, 10:52 PM IST