ಮಂಡಲ್:ನಗರದಲ್ಲಿ ಕೊರೊನಾ ಕರ್ಫ್ಯೂ 17 ಮೇ ವರೆಗೆ ವಿಸ್ತರಿಸಲಾಗಿದೆ. ಆದ್ರೂ ಜನರು ಮಾತ್ರ ಮನೆಯಲ್ಲಿರದೇ ಅನಾವಶ್ಯಕವಾಗಿ ಹೊರಗಡೆ ಅಲೆದಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಒಂದು ಐಡಿಯಾ ಮಾಡಿದ್ದಾರೆ.
ಮೋನಾದಿಂದ ಜಾಗೃತಿ!
ಮಂಡಲ್:ನಗರದಲ್ಲಿ ಕೊರೊನಾ ಕರ್ಫ್ಯೂ 17 ಮೇ ವರೆಗೆ ವಿಸ್ತರಿಸಲಾಗಿದೆ. ಆದ್ರೂ ಜನರು ಮಾತ್ರ ಮನೆಯಲ್ಲಿರದೇ ಅನಾವಶ್ಯಕವಾಗಿ ಹೊರಗಡೆ ಅಲೆದಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಒಂದು ಐಡಿಯಾ ಮಾಡಿದ್ದಾರೆ.
ಮೋನಾದಿಂದ ಜಾಗೃತಿ!
ಜನರಿಗೆ ಜಾಗೃತಿ ಮೂಡಿಸಲು ಈಗ ಡಾಗ್ ಸ್ಕ್ವಾಡ್ ತಂಡ ಮುಂದೆ ಬಂದಿದೆ. ಶ್ವಾನ ಮೋನಾ ಕೊರಳಿನಲ್ಲಿ ‘ನಾನು ನಿಯತ್ತಾಗಿದ್ದೇನೆ. ನೀವು ನಿಮ್ಮ ನಿಯತ್ತನ್ನು ನಿಭಾಯಿಸಿ. ಮನೆಯಲ್ಲಿರಿ, ಸುರಕ್ಷಿತವಾಗಿರಿ’ ಎಂದು ನಾಮ ಫಲಕ ಹಾಕಿ ಜಾಗೃತಿ ಮೂಡಿಸುತ್ತಿದ್ದಾರೆ.
ಇನ್ನು ಮೋನಾ ಸಹ ಎರಡು ಕೈ ಮುಗಿದು ಮನೆಯಲ್ಲೇ ಇರಿ ಎಂದು ಬೇಡಿಕೊಳ್ಳುತ್ತಿದೆ. ಈಗಲಾದ್ರೂ ಜನ ಹೊರ ಬರದಂತೆ ತಮ್ಮ ತಾವೂ ಸುರಕ್ಷಿತವಾಗಿಟ್ಟುಕೊಳ್ಳಲಿ ಎಂಬುದು ಡಾಗ್ ಸ್ಕ್ವಾಡ್ ತಂಡದ ಆಶಯವಾಗಿದೆ.
ಕೊರೊನಾ ಸಾಂಕ್ರಮಿಕ ಸೋಂಕು ದೇಶಾದ್ಯಂತ ಹಬ್ಬುತ್ತಿದ್ದು, ದಿನದಿಂದ ದಿನಕ್ಕೆ ಕೊರೊನಾ ಬಾದಿತರ ಸಂಖ್ಯೆಯೂ ಹೆಚ್ಚುತ್ತಿದೆ. ದೇಶಾದ್ಯಂತ ಕೊರೊನಾ ಹತ್ತಿಕ್ಕಲು ಕೊರೊನಾ ವಾರಿಯರ್ಸ್ ತಂಡ ಹಗಲಿರುಳು ಎನ್ನದೆ ಹೋರಾಡುತ್ತಿದೆ. ಜನರು ಸಹಾ ಇದಕ್ಕೆ ಸ್ಪಂಧಿಸಿ ಮನೆಯಲ್ಲಿದ್ರೆ ಒಳ್ಳೆದೆ ಎಂದು ಡಾಗ್ ಸ್ಕ್ವಾಡ್ ಅಧಿಕಾರಿಯ ಮಾತಾಗಿದೆ.