ರತನ್ಗಢ(ಚುರು): ರಾಜ್ಯಾದ್ಯಂತ ಪೊಲೀಸ್ ಅಧಿಕಾರಿಗಳು ಮಾದಕ ವಸ್ತು ವಿರುದ್ಧ ಅಭಿಯಾನ ಪ್ರಾರಂಭಿಸಿದ್ದು, ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಇನ್ನು ಕಾರ್ಯಾಚರಣೆ ನಡೆಸಿದ ಎಸ್‌ಪಿ ನಾರಾಯಣ್ ತೊಗಾಸ್ ಅವರ ನೇತೃತ್ವದ ಚುರು ಪೊಲೀಸರ ತಂಡ ಟ್ರಕ್‌ನಿಂದ 1 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ದೋಡಾ ಗಸಗಸೆಯನ್ನು ವಶಪಡಿಸಿಕೊಂಡಿದೆ.
ಪೊಲೀಸರ ಕಾರ್ಯಾಚರಣೆ: 1 ಕೋಟಿ ಮೌಲ್ಯದ ಮಾದಕ ವಸ್ತು ವಶ
ರಾಜಸ್ಥಾನದ ಎಸ್‌ಪಿ ನಾರಾಯಣ್ ತೊಗಾಸ್ ಅವರ ನೇತೃತ್ವದ ಚುರು ಪೊಲೀಸರ ತಂಡ ಟ್ರಕ್‌ನಿಂದ 1 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ದೋಡಾ ಗಸಗಸೆಯನ್ನು ವಶಪಡಿಸಿಕೊಂಡಿದೆ.
ಮಾದಕ ವಸ್ತು ವಶ
ರಾಷ್ಟ್ರೀಯ ಹೆದ್ದಾರಿ 11ರಲ್ಲಿ ಕಾರ್ಯಾಚರಣೆ ನಡೆಸಿದ ಜಿಎಸ್‌ಟಿ ತಂಡದ ಸಬ್‌ಇನ್ಸ್‌ಪೆಕ್ಟರ್ ರಾಕೇಶ್ ಶಂಖಾನ್, ದಶರಥ್ ಸಿಂಗ್ ಮತ್ತು ಗೋಪಾಲ್ ಸಿಂಗ್ ಅವರು, ರಾಮಗಂಜ್‌ಮಂಡಿಯಿಂದ ಹನುಮಾನ್ಗಡಕ್ಕೆ ತೆರಳುತ್ತಿದ್ದ ಟ್ರಕ್ ತಡೆದಿದ್ದಾರೆ. ಈ ವೇಳೆ, ತನಿಖೆ ನಡೆಸಿದಾಗ ಜೋಳ ತುಂಬಿದ ಚೀಲಗಳ ನಡುವೆ ಮಾದಕ ವಸ್ತು ಪತ್ತೆಯಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಲೇಹ್ ಮೊಹಮ್ಮದ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಲಾರಿಯನ್ನು ವಶಪಡಿಸಿಕೊಂಡಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.