ದೋಡಾ (ಜಮ್ಮು ಕಾಶ್ಮೀರ): ಶಸ್ತ್ರಾಸ್ತ್ರ ಹೊತ್ತಿದ್ದ ಫರೀದ್ ಅಹ್ಮದ್ ಎಂಬ ಭಯೋತ್ಪಾದಕನನ್ನು ಜಿಲ್ಲೆಯ ಹೊರವಲಯದಲ್ಲಿ ದೋಡಾ ಪೊಲೀಸರು ಭದ್ರತಾ ಪಡೆಗಳೊಂದಿಗೆ ಬಂಧಿಸಿದ್ದಾರೆ. ಆರೋಪಿ ಕೋಟಿ ದೋಡಾ ನಿವಾಸಿ ಗುಲಾಮ್ ಹಸನ್ ಅವರ ಪುತ್ರ ಎಂದು ತಿಳಿದುಬಂದಿದೆ. ಆರೋಪಿಯಿಂದ 1 ಚೈನೀಸ್ ಪಿಸ್ತೂಲ್, 02 ಮ್ಯಾಗಜೀನ್, 14 ಲೈವ್ ಕಾರ್ಟ್ರಿಡ್ಜ್ಗಳು ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಅಮರನಾಥ ಯಾತ್ರೆಗೆ ಮುನ್ನ ಹೆಚ್ಚಿನ ಭದ್ರತಾ ಕ್ರಮವಾಗಿ, ಪಿಎಸ್ ದೋಡಾದ ಪೊಲೀಸ್ ಪಡೆ ದೋಡಾ ಟೌನ್‌ನ ಹೊರವಲಯದಲ್ಲಿ ತಪಾಸಣೆ ನಡೆಸಲು ವಾಸ್ತವ್ಯ ಹೂಡಿದ್ದರು. ಈ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊತ್ತಿದ್ದ ಫರೀದ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.