ನವ ದೆಹಲಿ: ಹುಟ್ಟಿನಿಂದಲೇ ವಿಚಿತ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಂಗ್ಲಾದೇಶದ 3 ತಿಂಗಳ ಮಗುವಿಗೆ ಎಐಐಎಂಎಸ್(ಏಮ್ಸ್) ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮಗುವಿನ ಮೆದುಳಿನ ಉಬ್ಬು ಭಾಗವನ್ನು ತೆಗೆದು ತಲೆಗೆ ಸರಿಯಾದ ಆಕಾರ ನೀಡಿದ್ದಾರೆ.
ಈ ಮಗು ಹುಟ್ಟಿನಿಂದ ಅಪರೂಪದ ಜೈಂಟ್ ಆಕ್ಸಿಪಿಟಲ್ ಎನ್ಸೆಫಲೋಸಿಲ್‌ನಿಂದ ಬಳಲುತ್ತಿತ್ತು. ಈ ರೋಗಕ್ಕೆ ತುತ್ತಾದವರ ಮೆದುಳು ಚೀಲದಂತೆ ಹಿಗ್ಗುತ್ತದೆ. ಶಸ್ತ್ರಚಿಕಿತ್ಸೆ ಮಾಡದಿದ್ದರೆ ಮೃತಪಡುವ ಸಾಧ್ಯತೆ ಹೆಚ್ಚು. ಚಿಕಿತ್ಸೆ ನೀಡದಿದ್ದರೆ ಅದು ಸಿಡಿದು ಮಗು ಮೆದುಳು ಜ್ವರಕ್ಕೆ ತುತ್ತಾಗಬಹುದು ಎಂದು ಏಮ್ಸ್‌ನ ‘ನ್ಯೂರೋ ಸರ್ಜರಿ’ ವಿಭಾಗದ ಪ್ರಾಧ್ಯಾಪಕ ಡಾ.ದೀಪಕ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ:ಬೆನ್ನುಮೂಳೆ ಮುರಿದ ಮೂವರ ಬಾಳಿಗೆ ಬೆಳಕು ನೀಡಿದ ಕಲಬುರಗಿ ವೈದ್ಯರ ತಂಡ
ಮೂರು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಚೀಲವನ್ನು ತೆಗೆದುಹಾಕಿ, ತಲೆಬುರುಡೆಯ ಆಕಾರ ಮರುಸ್ಥಾಪಿಸಿದ್ದಾರೆ. ತಲೆಬುರುಡೆಯ ಹಿಂಭಾಗದಲ್ಲಿ ಸಾಕಷ್ಟು ಊತವಿರುವುದರಿಂದ ಮಗುವಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದರು.
ಕೆಲ ತಿಂಗಳ ಹಿಂದೆ ಮಗುವಿನ ತಂದೆ ಅಬಿದ್ ಆಜಾದ್ ಅವರು ಡಾ.ಗುಪ್ತ ಅವರನ್ನು ಸಂಪರ್ಕಿಸಿದ್ದರು. ಮಗುವಿನ ಸ್ಥಿತಿಯನ್ನು ಪರಿಶೀಲಿಸಿದ ನಂತರ, ನಾವು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದ್ದೇವೆ. ಡಿಸೆಂಬರ್ 12 ರಂದು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದರಲ್ಲಿ ಚೀಲದ ಆಕಾರವನ್ನು ಪಡೆದ ಮೆದುಳಿನ ಉಬ್ಬುವ ಅಗತ್ಯವಲ್ಲದ ಭಾಗವನ್ನು ಕತ್ತರಿಸಲಾಯಿತು. ಎಲ್ಲಾ ಸಾಮಾನ್ಯ ಮೆದುಳಿನ ಅಂಗಾಂಶವನ್ನು ಸಂರಕ್ಷಿಸಲಾಗಿದೆ ಮತ್ತು ಭವಿಷ್ಯದಲ್ಲಿ ಮೆದುಳು ಬೆಳೆಯಲು ಅವಕಾಶ ಮಾಡಿಕೊಡಲು ಅದೇ ಸಮಯದಲ್ಲಿ ವಿಸ್ತಾರವಾದ ಕ್ರ್ಯಾನಿಯೊಪ್ಲ್ಯಾಸ್ಟಿ ನಡೆಸಲಾಯಿತು ಎಂದು ಡಾ.ಗುಪ್ತ ತಿಳಿಸಿದರು.