ಕರ್ನಾಟಕ

karnataka

ETV Bharat / bharat

'ಕೋವಾಕ್ಸಿನ್ ಪರಿಣಾಮಗಳ ಬಗ್ಗೆ ವೈದ್ಯರು ನನಗೆ ಮೊದಲೇ ಮಾಹಿತಿ ನೀಡಿದ್ದರು'

ಕೋವಾಕ್ಸಿನ್​​ನ‌ ಮೊದಲ ಡೋಸ್​ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್​ ನೀಡಲಾಗುವುದು. ಎರಡನೇ ಡೋಸ್​ ನೀಡಿದ 14 ದಿನಗಳ ಬಳಿಕ ದೇಹದಲ್ಲಿ ಪ್ರತಿಕಾಯಗಳು ವೃದ್ಧಿಯಾಗುತ್ತವೆ ಎಂದು ವೈದ್ಯರು ಮಾಹಿತಿ ನೀಡಿದ್ದರು ಎಂದು ಹರಿಯಾಣ ಸರ್ಕಾರದ ಸಚಿವ ಅನಿಲ್ ವಿಜ್ ಟ್ವೀಟ್​ ಮಾಡಿದ್ದಾರೆ.

Covaxin
ಕೋವಾಕ್ಸಿನ್

By

Published : Dec 6, 2020, 3:58 PM IST

Updated : Dec 6, 2020, 4:49 PM IST

ಚಂಡೀಗಢ (ಹರಿಯಾಣ): ದೇಶೀಯ ಕೊರೊನಾ ಲಸಿಕೆಯಾದ 'ಕೊವಾಕ್ಸಿನ್'ನ ಕ್ಲಿನಿಕಲ್​ ಪ್ರಯೋಗದ ಡೋಸ್ ಪಡೆದಿದ್ದ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ನಿನ್ನೆ ಸೋಂಕು ತಗುಲಿತ್ತು. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು ವೈದ್ಯರು ನೀಡಿದ್ದ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

"ಕೋವಾಕ್ಸಿನ್​​ನ‌ ಮೊದಲ ಡೋಸ್​ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್​ ನೀಡಲಾಗುವುದು. ಎರಡನೇ ಡೋಸ್​ ನೀಡಿದ 14 ದಿನಗಳ ಬಳಿಕ ದೇಹದಲ್ಲಿ ಪ್ರತಿಕಾಯಗಳು ವೃದ್ಧಿಯಾಗುತ್ತವೆ ಎಂದು ವೈದ್ಯರು ತಿಳಿಸಿದ್ದರು" ಎಂದು ಅನಿಲ್ ವಿಜ್ ಟ್ವೀಟ್​ ಮಾಡಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ಕೊರೊನಾ ಸೋಂಕಿಗೆ ಒಳಗಾದೆ. ನಾನು ಅಂಬಾಲಾದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ, ನಾನು ಆರೋಗ್ಯವಾಗಿದ್ದೇನೆ ಎಂದು ಸಚಿವರು ಹೇಳಿದ್ದಾರೆ.

ಓದಿ:ಕೊವಾಕ್ಸಿನ್ ಟ್ರಯಲ್ ಡೋಸ್ ಪಡೆದ ಹರಿಯಾಣ ಸಚಿವ ಅನಿಲ್ ವಿಜ್

ಕೊವಾಕ್ಸಿನ್​​ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗ ಹರಿಯಾಣದಲ್ಲಿ ಆರಂಭವಾದ ದಿನ (ನವೆಂಬರ್​ 20)ದಂದು ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್ ಮೊದಲ ಲಸಿಕೆ ಪ್ರಯೋಗ ನನ್ನ ಮೇಲೆಯೇ ಆಗಲಿ ಎಂದು ಸ್ವಯಂಪ್ರೇರಿತವಾಗಿ ಮೊದಲ ಡೋಸ್​​ ಹಾಕಿಸಿಕೊಂಡಿದ್ದರು.

"ಕೋವಾಕ್ಸಿನ್ ಅನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಗೊಳಿಸಲಾಗಿದೆ. ಇದರ ಕ್ಲಿನಿಕಲ್ ಪ್ರಯೋಗಗಳು ಎರಡು-ಡೋಸ್ ವೇಳಾಪಟ್ಟಿಯನ್ನು ಆಧರಿಸಿವೆ. ಮೊದಲ ಡೋಸ್​ ನೀಡಿದ 28 ದಿನಗಳ ಬಳಿಕ 2ನೇ ಡೋಸ್​ ನೀಡಲಾಗುತ್ತದೆ. ಲಸಿಕೆ ಪರಿಣಾಮಕಾರಿತ್ವವನ್ನು ಎರಡನೇ ಡೋಸ್ ನೀಡಿದ 14 ದಿನಗಳ ನಂತರ ನಿರ್ಧರಿಸಲಾಗುತ್ತದೆ" ಎಂದು ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಸಂಸ್ಥೆ ತಿಳಿಸಿದೆ.

Last Updated : Dec 6, 2020, 4:49 PM IST

ABOUT THE AUTHOR

...view details