ಕರೀಂನಗರ(ತೆಲಂಗಾಣ):ವೈದ್ಯರು ಎಚ್ಚರ ತಪ್ಪಿದ್ರೆ ಅನಾಹುತ ಖಂಡಿತ. ಹೀಗೆ ಇಲ್ಲೊಬ್ಬ ವೈದ್ಯರು ತಮ್ಮ ನಿರ್ಲಕ್ಷ್ಯದಿಂದ ಹೆರಿಗೆ ಶಸ್ತ್ರಚಿಕಿತ್ಸೆಗೆಂದು ಒಬ್ಬಾಕೆ ಬಂದಿದ್ರೆ, ಟೆಸ್ಟ್ಗೆ ಬಂದ ಇನ್ನೊಬ್ಬಾಕೆಯ ಹೊಟ್ಟೆ ಕೊಯ್ದಿದ್ದಾರೆ. ಈ ಘಟನೆ ಕರೀಂನಗರ ಜಿಲ್ಲೆಯ ಮಾತಾಶಿಶು ಸಂರಕ್ಷಣಾ ಕೇಂದ್ರದಲ್ಲಿ ನಡೆದಿದೆ.
ಕರೀಂನಗರದ ನರ್ಸಿಂಗಾಪುರದ ನಿವಾಸಿ ಮಾಲತಿ ಏಳು ತಿಂಗಳ ಗರ್ಭವತಿ. ಆಕೆ ಗುರುವಾರ ಅಸ್ವಸ್ಥಗೊಂಡು, ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಮಾತಾಶಿಶು ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಅಲ್ಲಿ ಆಕೆಗೆ ಸ್ಕ್ಯಾನಿಂಗ್ ಮಾಡಲಾಗಿದೆ. ಈ ವೇಳೆ ಗರ್ಭದೊಳಗೆ ಇಬ್ಬರು ಮಕ್ಕಳಿರುವುದು ಕಂಡುಬಂದಿದೆ. ಇವುಗಳ ಪೈಕಿ ಒಂದು ಮಗು ಬದುಕುವುದಕ್ಕೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ಸೋಮವಾರ ಗರ್ಭಕೋಶಕ್ಕೆ ಹೊಲಿಗೆ ಮಾಡುವ ಬಗ್ಗೆ ಹೇಳಿದ್ದರು.