ಸತಾರಾ (ಮಹಾರಾಷ್ಟ್ರ): ವೈದ್ಯಕೀಯ ತಪಾಸಣೆಗೆಂದು ಖಾಸಗಿ ಆಸ್ಪತ್ರೆಗೆ ಬಂದಿದ್ದ ವೃದ್ಧೆಯೊಬ್ಬರಿಗೆ ಹೃದಯಾಘಾತವಾಗಿದ್ದು, ಅಲ್ಲೇ ಇದ್ದ ವೈದ್ಯರು ಮತ್ತು ಸಿಬ್ಬಂದಿ ಮಹಿಳೆಯ ಹೃದಯಕ್ಕೆ ಮಸಾಜ್ ಮಾಡುವ ಮೂಲಕ ಪ್ರಥಮ ಚಿಕಿತ್ಸೆ ನೀಡಿ ಮತ್ತೆ ಉಸಿರಾಡುವಂತೆ ಮಾಡಿದ್ದಾರೆ. ಇಡೀ ಘಟನೆ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈದ್ಯರ ಕಾರ್ಯಕ್ಕೆ ಪ್ರಸಂಶೆ ವ್ಯಕ್ತವಾಗಿದೆ.
ಸಾಂಗ್ಲಿ ಜಿಲ್ಲೆಯ ಕಡೆಗಾಂವ್ ತಾಲೂಕಿನ ಅಂಬಕ್ ಚಿಂಚಣಿ ಗ್ರಾಮದ ವೃದ್ಧೆಯೊಬ್ಬರು ಮಧುಮೇಹ ಮತ್ತು ಹೃದ್ರೋಗದಿಂದ ಬಳಲುತ್ತಿದ್ದು, ಸತಾರಾ ಜಿಲ್ಲೆಯ ಕರಡದಲ್ಲಿರುವ ಹೃದ್ರೋಗ ತಜ್ಞ ದಿಲೀಪ್ ಪಾಟೀಲ್ ಅವರ ಆಸ್ಪತ್ರೆಗೆ ಪರೀಕ್ಷೆಗೆ ಬಂದಿದ್ದರು. ಆಸ್ಪತ್ರೆಯ ಬೆಂಚಿನ ಮೇಲೆ ಕುಳಿತಿದ್ದ ವೇಳೆ ಹೃದಯ ಸ್ತಂಭನದಿಂದಾಗಿ ಅವರ ಉಸಿರಾಟ ನಿಂತುಹೋಗಿತ್ತು.