ಹೈದರಾಬಾದ್ (ತೆಲಂಗಾಣ):ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಫೆಬ್ರವರಿ 6 ರಂದು ಮುಂಬೈನಲ್ಲಿ ನಿಧನರಾಗಿದ್ದು, ಗಾಯಕಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ 28 ದಿನಗಳನ್ನು ಆಸ್ಪತ್ರೆಯಲ್ಲೇ ಕಳೆದಿದ್ದರು. ಆಸ್ಪತ್ರೆಯಲ್ಲಿದ್ದ ದಿನಗಳಲ್ಲಿ, ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಪ್ರತೀತ್ ಸಮ್ದಾನಿ ಅವರು ಅಂತಿಮ ಕ್ಷಣಗಳಲ್ಲಿನ ಅವರ ಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಡಾ.ಸಮ್ದಾನಿ ಅವರು ಮಂಗೇಶ್ಕರ್ ಅವರ ಆರೋಗ್ಯ ಹದಗೆಟ್ಟಾಗಲೆಲ್ಲ ಚಿಕಿತ್ಸೆ ನೀಡುತ್ತಿದ್ದರು. ಈ ಬಾರಿ ಅವರ ಆರೋಗ್ಯ ಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ನಿರಂತರ ಪ್ರಯತ್ನಗಳ ಹೊರತಾಗಿಯೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದ ಅವರು, ಮಂಗೇಶ್ಕರ್ ಅವರು ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳಬೇಕು ಎನ್ನುತ್ತಿದ್ದರು ಎಂದು ಹೇಳಿದರು.
ಅಂತಿಮ ಕ್ಷಣಗಳಲ್ಲಿ ಅವರ ಸ್ಥಿತಿಯನ್ನು ಬಹಿರಂಗಪಡಿಸಿದ ಡಾ ಸಮ್ದಾನಿ, ಅವರ ಮುಖದಲ್ಲಿ ನಗು ಇತ್ತು, ಈ ಬಾರಿ ನಾನು ಅವರಿಗೆ ಚಿಕಿತ್ಸೆ ನೀಡುತ್ತಿರುವಾಗಿನಿಂದ ಗಮನಿಸಿದಂತೆ ತುಂಬಾ ಕಡಿಮೆ ಮಾತನಾಡುತ್ತಿದ್ದರು. ಆದರೆ, ದೇವರ ಪ್ಲಾನ್ ಎಂಬಂತೆ ಅವರು ನಮ್ಮೆಲ್ಲರನ್ನೂ ಶಾಶ್ವತವಾಗಿ ತೊರೆದರು ಎಂದು ಬೇಸರ ವ್ಯಕ್ತಪಡಿಸಿದರು.