ಕರೀಂಗಂಜ್ (ಅಸ್ಸೋಂ): ಅಸ್ಸೋಂನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗರ್ಭಿಣಿಗೆ ಶಸ್ತ್ರಚಿಕಿತ್ಸೆ ನಡೆಸಿದಾಗ ಆಕೆಯ ಹೊಟ್ಟೆಯಲ್ಲಿರುವ ಶಿಶುವಿಗೆ ಕೇವಲ 7 ತಿಂಗಳು ಎಂದು ಗೊತ್ತಾಗಿದೆ. ಹೀಗಾಗಿಯೇ ಮತ್ತೆ ಶಿಶುವನ್ನು ಆಕೆಯ ಗರ್ಭದಲ್ಲೇ ವೈದ್ಯರು ಇರಿಸಿದ್ದಾರೆ. ಈ ವಿಷಯ ತಿಳಿದ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕರೀಂಗಂಜ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ಡಾ.ಆಶಿಶ್ ಕುಮಾರ್ ಬಿಸ್ವಾಸ್ ಹೊಟ್ಟೆ ನೋವು ಎಂದು ಬಂದ ಗರ್ಭಿಣಿಗೆ 12 ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಹೆರಿಗೆ ಮಾಡಿಸಲೆಂದೇ ಆಪರೇಷನ್ ಮಾಡಿದ್ದರು. ಆದರೆ, ಆಗ ಶಿಶುವಿಗೆ ಇನ್ನೂ ಏಳೇ ತಿಂಗಳಾಗಿದ್ದು, ಭ್ರೂಣ ಬೆಳೆದಿಲ್ಲ ಎಂದು ತಿಳಿದು ಆ ಶಿಶುವನ್ನು ಮತ್ತೆ ಆಕೆಯ ಗರ್ಭದಲ್ಲೇ ಇರಿಸಿದ್ದಾರೆ.