ಕರ್ನಾಟಕ

karnataka

ETV Bharat / bharat

ಕಿಡ್ನಿಸ್ಟೋನ್​ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ.. ಡಾಕ್ಟರ್​​​ ಎಡವಟ್ಟಿಗೆ ರೋಗಿ ಬಲಿ! - ಕಿಡ್ನಿಸ್ಟೋನ್ ಬದಲು ಕಿಡ್ನಿ ತೆಗೆದ ವೈದ್ಯ

ವೈದರು ಮಾಡಿರುವ ಎಡವಟ್ಟಿನಿಂದಾಗಿ ರೋಗಿಯೊಬ್ಬ ತನ್ನ ಪ್ರಾಣ ಕಳೆದುಕೊಂಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ನ ಕೆಎಂಜಿ ಆಸ್ಪತ್ರೆಯಲ್ಲಿ ನಡೆದಿದೆ.

Doctor removes kidney
Doctor removes kidney

By

Published : Oct 19, 2021, 5:09 PM IST

ಅಹಮದಾಬಾದ್​: ವೈದ್ಯೋ ನಾರಾಯಣ ಹರಿ ಎಂಬ ಗಾದೆ ಮಾತಿದೆ. ಆದರೆ, ವೈದ್ಯರು ಕೆಲವೊಮ್ಮೆ ಮಾಡುವ ಎಡವಟ್ಟಿನಿಂದಾಗಿ ರೋಗಿಗಳು ತಮ್ಮ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ. ಇಂತಹ ಅನೇಕ ಘಟನೆಗಳು ಈಗಾಗಲೇ ನಡೆದು ಹೋಗಿದ್ದು, ಸದ್ಯ ಗುಜರಾತ್​ನ ಆಸ್ಪತ್ರೆಯಲ್ಲಿ ವೈದ್ಯರು ಮಾಡಿರುವ ಎಡವಟ್ಟಿನಿಂದ ರೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಗುಜರಾತ್​ನ ಅಹಮದಾಬಾದ್​​ನ ಕೆಎಂಜಿ ಜನರಲ್​ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕಳೆದ ನಾಲ್ಕು ತಿಂಗಳಿಂದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಶಸ್ತ್ರಚಿಕಿತ್ಸೆ ನಡೆಸಿ ಕಿಡ್ನಿಯಲ್ಲಿನ ಸ್ಟೋನ್​ ತೆಗೆದು ಹಾಕಬೇಕಾಗಿತ್ತು. ಆದರೆ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು, ಆತನ ಕಿಡ್ನಿಯನ್ನೇ ತೆಗೆದು ಹಾಕಿದ್ದಾರೆ. ಈ ಎಡವಟ್ಟಿನಿಂದಾಗಿ ರೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಇದನ್ನೂ ಓದಿರಿ:'ಶ್ರೀಲೀಲಾ ನನ್ನ ಮಗಳಲ್ಲ'... ಆಸ್ತಿಗಾಗಿ ಈ ರೀತಿ ಹೇಳ್ತಿದ್ದಾರೆಂದ ಆಂಧ್ರದ ಉದ್ಯಮಿ!

ದೇವೇಂದ್ರಭಾಯ್​ ರಾವಲ್ ಎಂಬ ರೋಗಿ ಕೆಎಂಜಿ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೇ ಡಾ. ಶಿವುಭಾಯಿ ಪಟೇಲ್​​ ನೇತೃತ್ವದ ತಂಡ ಅನೇಕ ವೈದ್ಯಕೀಯ ಪರೀಕ್ಷೆಗಳ ನಂತರ ಮೂತ್ರಪಿಂಡದಲ್ಲಿ 14ಎಂಎಂ ಕಲ್ಲು ಇರುವುದನ್ನ ಪತ್ತೆ ಮಾಡಿತ್ತು. ಸೆಪ್ಟೆಂಬರ್​​​ 3ರಂದು ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ವೇಳೆ ವೈದ್ಯರು, ಕಿಡ್ನಿಯಲ್ಲಿನ ಕಲ್ಲು ತೆಗೆಯುವ ಬದಲು ಆತನ ಕಿಡ್ನಿಯನ್ನೇ ತೆಗೆದು ಹಾಕಿದ್ದಾರೆ. ರೋಗಿಯ ಜೀವ ಉಳಿಸಲು ಮೂತ್ರಪಿಂಡ ತೆಗೆಯುವುದು ಅನಿವಾರ್ಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ ರೋಗಿ ಸಾವನ್ನಪ್ಪಿದ್ದಾನೆ.

ಇದಕ್ಕೆ ಸಂಬಂಧಿಸಿದಂತೆ ಮೃತ ರೋಗಿಯ ಕುಟುಂಬಸ್ಥರು ಗುಜರಾತ್​ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗದಲ್ಲಿ ದೂರು ದಾಖಲು ಮಾಡಿದ್ದಾರೆ. ಇದರ ವಾದ - ಪ್ರತಿವಾದ ಆಲಿಸಿರುವ ಕೋರ್ಟ್​​ ಇದೀಗ ರೋಗಿಯ ಕುಟುಂಬಕ್ಕೆ ಆಸ್ಪತ್ರೆ ಆಡಳಿತ ಮಂಡಳಿ 11.23 ಲಕ್ಷ ರೂ. ಪರಿಹಾರ ರೂಪದಲ್ಲಿ ನೀಡುವಂತೆ ಸೂಚನೆ ನೀಡಿದೆ. ಜೊತೆಗೆ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯದಿಂದಾಗಿ ಈ ಕೃತ್ಯ ನಡೆದಿದೆ ಎಂದು ಅಭಿಪ್ರಾಯಪಟ್ಟಿದೆ.

ABOUT THE AUTHOR

...view details