ಕರ್ನಾಟಕ

karnataka

ETV Bharat / bharat

2ನೇ ಮದುವೆಯಾದ್ರೂ ತೀರದ ವೈದ್ಯನ ವರದಕ್ಷಿಣೆ ದಾಹ; 2ನೇ ಸಂಸಾರದಲ್ಲೂ ನೆಮ್ಮದಿ ಕಾಣದೆ ವೈದ್ಯೆಯ ಆತ್ಮಹತ್ಯೆ - ವರದಕ್ಷಿಣೆ ಕಿರುಕುಳಕ್ಕೆ ವೈದ್ಯೆ ಸಾವು

ಗಂಡ ನೀಡುತ್ತಿದ್ದ ವರದಕ್ಷಿಣೆ ಕಿರುಕುಳವನ್ನು ತಾಳಲಾರದೆ ವೈದ್ಯೆಯಾಗಿರುವ ಹೆಂಡತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

MBBS DOCTOR COMMITS SUICIDE
MBBS DOCTOR COMMITS SUICIDE

By

Published : Mar 17, 2022, 3:20 PM IST

Updated : Mar 17, 2022, 10:55 PM IST

ಹೈದರಾಬಾದ್​(ತೆಲಂಗಾಣ): ಗಂಡನ ವರದಕ್ಷಿಣೆ ಕಿರುಕುಳ ತಾಳಲಾರದೆ ವೈದ್ಯೆಯಾಗಿದ್ದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನ ಮಲಕಪೇಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪತಿ-ಪತ್ನಿ ಇಬ್ಬರೂ ವೈದ್ಯಕೀಯ ವೃತ್ತಿಯಲ್ಲಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಆದರೆ, ಗಂಡ ವರದಕ್ಷಿಣೆಗಾಗಿ ವಿಪರೀತ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ನೊಂದ ಪತ್ನಿ ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪತಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ನಲ್ಗೊಂಡದ ದಾಮರಚಾರ್ಲವಾಸಿ ನಿವಾಸಿ ಸಪ್ನಾ ಎಂಬವರು ಗಂಗನಪಲ್ಲಿಯ ವಿಶ್ವನಾಥ್​ ಜೊತೆ ಮೊದಲ ಮದುವೆ ಮಾಡಿಕೊಂಡಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಉಂಟಾಗದ ಕಾರಣಕ್ಕಾಗಿ ಅನಿವಾರ್ಯವಾಗಿ ವಿಚ್ಛೇದನ ಪಡೆದುಕೊಂಡಿದ್ದರು. 2015ರ ಏಪ್ರಿಲ್​ ತಿಂಗಳಲ್ಲಿ ಕರ್ನೂಲ್​​ನ ಡಾ.ಶ್ರೀಧರ್​​ ಜೊತೆ ಎರಡನೇ ಮದುವೆಯಾಗಿದ್ದಾರೆ. ಈ ವೇಳೆ ವರದಕ್ಷಿಣೆ ರೂಪದಲ್ಲಿ 10 ಲಕ್ಷ ರೂ. ನಗದು ಹಾಗೂ 14 ತೊಲ ಚಿನ್ನಾಭರಣ ನೀಡಲಾಗಿತ್ತು.

ಇದನ್ನೂ ಓದಿ:ಪಂಜಾಬ್ ಇತಿಹಾಸದಲ್ಲೇ ಯಾರೂ ತೆಗೆದುಕೊಳ್ಳದ ನಿರ್ಧಾರವನ್ನು ಶೀಘ್ರ ಘೋಷಿಸುತ್ತೇನೆ: ಪಂಜಾಬ್ ಸಿಎಂ

ಶ್ರೀಧರ್​, ಉಸ್ಮಾನಿಯಾ ವೈದ್ಯಕೀಯ ಕಾಲೇಜ್​​ನಲ್ಲಿ ಎಂಡಿ ಆದ ಬಳಿಕ ಸೈದಾಬಾದ್​ನ ವೆಂಕಟಾದ್ರಿ ನಗರದಲ್ಲಿ ವಾಸವಾಗಿದ್ದರು. ಈತ ಕಳೆದೊಂದು ವರ್ಷದಿಂದಲೂ ಹೆಂಡತಿಗೆ ವರದಕ್ಷಿಣೆ ವಿಚಾರವಾಗಿ ನಿತ್ಯ ಮಾನಸಿಕ, ದೈಹಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದರಿಂದ ಬೇಸರಗೊಂಡ ಪತ್ನಿ ಆತ್ಮಹತ್ಯೆಗೆ ಯತ್ನಿಸಿದಾಗ ಮನೋವೈದ್ಯರ ಬಳಿ ಕರೆದೊಯ್ಯಲಾಗಿತ್ತು. ಇದೇ ವಿಷಯವಾಗಿ ಪೊಲೀಸರಿಗೆ ಸಪ್ನಾ ತಂದೆ ದೂರು ಕೂಡಾ ನೀಡಿದ್ದು, ವರದಕ್ಷಿಣೆ ವಿಚಾರವಾಗಿ ಮೇಲಿಂದ ಮೇಲೆ ಮಗಳ ಮೇಲೆ ಒತ್ತಡ ಹಾಕುತ್ತಿರುವುದಾಗಿ ತಿಳಿಸಿದ್ದರು. ಇದರ ಬೆನ್ನಲ್ಲೇ ಮಾರ್ಚ್​ 8ರಂದು ಸ್ವಪ್ನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Last Updated : Mar 17, 2022, 10:55 PM IST

ABOUT THE AUTHOR

...view details