ಕಾಮಾರೆಡ್ಡಿ, ತೆಲಂಗಾಣ :ಸಾವು ಯಾವಾಗ ಬರುತ್ತೋ? ಹೇಗೆ ಬರುತ್ತೋ? ಯಾರಿಗೂ ಗೊತ್ತಾಗೋದಿಲ್ಲ. ನಿನ್ನೆ ಆರೋಗ್ಯದಿಂದ ಇರುವವರು ಇಂದು ಶವವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂಬ ಸತ್ಯ ಎಲ್ಲರಿಗೂ ಅರಿವಾಗುತ್ತಿದೆ. ಇಂಥದ್ದೇ ಒಂದು ಘಟನೆ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ರೋಗಿಯ ಜೊತೆಗೆ ವೈದ್ಯನೂ ಕೂಡ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆೆ.
ಕಾಮಾರೆಡ್ಡಿಯ ಜಿಲ್ಲೆಯ ಗಾಂಧಾರಿ ಮಂಡಲದ ಗುಜ್ಜುತಂಡಾ ಎಂಬ ಪ್ರದೇಶಕ್ಕೆ ಸೇರಿದ ಸರ್ಜು ಎಂಬಾತನಿಗೆ ಭಾನುವಾರ ಬೆಳಗ್ಗೆ ಹೃದಯಾಘಾತವಾಗಿತ್ತು. ಈ ವೇಳೆ ಕುಟುಂಬಸ್ಥರು ರೋಗಿಯನ್ನು ಗಾಂಧಾರಿ ಪ್ರದೇಶಲ್ಲಿರುವ ಖಾಸಗಿ ನರ್ಸಿಂಗ್ ಹೋಮ್ಗೆ ಕರೆ ತಂದಿದ್ದರು.
ಈ ವೇಳೆ ಧಾವಿಸಿದ ವೈದ್ಯ ಲಕ್ಷ್ಮಣ್ಗೆ, ಸರ್ಜುಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಹೃದಯಾಘಾತವಾಗಿದೆ. ರೋಗಿಯನ್ನು ನೋಡುತ್ತಲೇ ಲಕ್ಷ್ಮಣ್ ಸ್ಥಳದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಸರ್ಜುವನ್ನು ಕಾಮಾರೆಡ್ಡಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾರೂ, ಮಾರ್ಗಮಧ್ಯೆ ಸರ್ಜು ಸಾವನ್ನಪ್ಪಿದ್ದಾರೆ.
ಮೆಹಬೂಬಾಬಾದ್ಗೆ ಸೇರಿದ ವೈದ್ಯ ಲಕ್ಷ್ಮಣ್ ನಿಜಾಮಾಬಾದ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಇದರ ಜೊತೆಗೆ ಗಾಂಧಾರಿ ಮಂಡಲ್ನಲ್ಲಿ ಖಾಸಗಿ ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದರು. ಈ ಲಕ್ಷ್ಮಣ್ ಮೃತದೇಹವನ್ನು ಮೆಹಬೂಬಾಬಾದ್ಗೆ ಕಳುಹಿಸಲಾಗಿದೆ.
ಇದನ್ನೂ ಓದಿ:Viral Video: ಆಸ್ತಿ ಮೇಲಿನ ವ್ಯಾಮೋಹ.. ಮೈಸೂರಲ್ಲಿ ಖಾಲಿ ಪತ್ರಕ್ಕೆ ಹೆಣದ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು!