ಕರ್ನಾಟಕ

karnataka

ETV Bharat / bharat

ನಾನು ಯಾರೆಂದು ಗೊತ್ತಾ?.. ಪ್ರಧಾನಿ ಪ್ರಶ್ನೆಗೆ 8 ವರ್ಷದ ಬಾಲಕಿ ನೀಡಿದ ಉತ್ತರ ಏನಿರಬಹುದು? - ಪ್ರಧಾನಿ ಪ್ರಶ್ನೆಗೆ 8 ವರ್ಷದ ಬಾಲಕಿ ನೀಡಿದ ಉತ್ತರ ಏನಿರಬಹುದು

ಕುಟುಂಬದೊಂದಿಗೆ ಸಂಸದರ ಮಗಳು ಪ್ರಧಾನಿ ಅವರನ್ನು ಭೇಟಿ ಮಾಡಿದರು. ಈ ವೇಳೆ, 8 ವರ್ಷದ ಪುಟ್ಟ ಬಾಲಕಿಯನ್ನು ನೋಡಿದ ಮೋದಿ, ಎಂದಿನ ಲಹರಿಯಂತೆಯೇ ಆಹಾನಾಗೆ ನಾನು ಯಾರೆಂದು ನಿಮಗೆ ಗೊತ್ತೇ ಎಂದು ಪ್ರಶ್ನೆಯ ಬಾಣವನ್ನು ಎಸೆದರು. ತಕ್ಷಣವೇ ಆ ಬಾಲಕಿ ಹೌದು ನನಗೆ ಗೊತ್ತು. ನೀವು ಮೋದಿ ಜೀ ಎಂದು ತಟ್ಟಂತ ಉತ್ತರ ನೀಡಿಯೇ ಬಿಟ್ಟಳು.

'Do you know what I do?' PM asks 8-year-old, answer leaves him in splits
ನಾನು ಯಾರೆಂದು ಗೊತ್ತಾ? ಪ್ರಧಾನಿ ಪ್ರಶ್ನೆಗೆ 8 ವರ್ಷದ ಬಾಲಕಿ ನೀಡಿದ ಉತ್ತರ ಏನಿರಬಹುದು?

By

Published : Jul 27, 2022, 8:57 PM IST

Updated : Jul 27, 2022, 10:09 PM IST

ನವದೆಹಲಿ :ದೇಶದ ದಂಡ ನಾಯಕ ಪ್ರಧಾನಿ ಮೋದಿ ಅವರನ್ನು ಇಂದು 8ವರ್ಷದ ಬಾಲಕಿಯೊಬ್ಬರು ಭೇಟಿ ಮಾಡಿದರು. ಬಾಲಕಿ ಭೇಟಿ ಮಾಡಿದ್ದೇನು ದೊಡ್ಡ ವಿಶೇಷವಲ್ಲ. ಆದರೆ ಪುಟ್ಟ ಬಾಲಕಿ ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಸಂಭಾಷಣೆಯೇ ಈ ಭೇಟಿಯ ಇಂದಿನ ಹೈಲೆಟ್​​

ನಾನು ಯಾರೆಂದು ಗೊತ್ತಾ? ಪ್ರಧಾನಿ ಪ್ರಶ್ನೆಗೆ 8 ವರ್ಷದ ಬಾಲಕಿ ನೀಡಿದ ಉತ್ತರ ಏನಿರಬಹುದು?

ಹೀಗಾಗಿಯೇ ಈ ದಿನವನ್ನು ಬಾಲಕಿ ತನ್ನ ವಿಶೇಷ ದಿನವೆಂದೇ ತಿಳಿದಿದ್ದಾಳೆ. ಅಂದಹಾಗೆ ಮಧ್ಯಪ್ರದೇಶದ ಉಜ್ಜಯಿನಿಯ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ, ಪ್ರಧಾನಿಯನ್ನು ಭೇಟಿ ಮಾಡಲು ತಮ್ಮ ಕುಟುಂಬದವರನ್ನು ಕರೆದುಕೊಂಡು ಸಂಸತ್​ಗೆ ಬಂದಿದ್ದರು.

ಈ ವೇಳೆ, ಕುಟುಂಬದೊಂದಿಗೆ ಸಂಸದರ ಮಗಳು ಪ್ರಧಾನಿ ಅವರನ್ನು ಭೇಟಿ ಮಾಡಿದರು. 8 ವರ್ಷದ ಪುಟ್ಟ ಬಾಲಕಿಯನ್ನು ನೋಡಿದ ಮೋದಿ, ಎಂದಿನ ಲಹರಿಯಂತೆಯೇ ಆಹಾನಾಗೆ ನಾನು ಯಾರೆಂದು ನಿಮಗೆ ಗೊತ್ತೇ ಎಂದು ಪ್ರಶ್ನೆಯ ಬಾಣವನ್ನು ಎಸೆದರು. ತಕ್ಷಣವೇ ಆ ಬಾಲಕಿ ಹೌದು ನನಗೆ ಗೊತ್ತು. ನೀವು ಮೋದಿ ಜೀ ಎಂದು ಉತ್ತರ ನೀಡಿಯೇ ಬಿಟ್ಟಳು.

ನಾನು ಯಾರೆಂದು ಗೊತ್ತಾ? ಪ್ರಧಾನಿ ಪ್ರಶ್ನೆಗೆ 8 ವರ್ಷದ ಬಾಲಕಿ ನೀಡಿದ ಉತ್ತರ ಏನಿರಬಹುದು?

ಅಷ್ಟೇ ಅಲ್ಲ ಮಾತು ಮುಂದುವರಿಸಿದ ಬಾಲಕಿ, ನಾನು ನಿಮ್ಮನ್ನು ಟಿವಿಯಲ್ಲಿ ನೋಡುತ್ತೇನೆ ಎಂದು ಪಟಪಟಾ ಎಂದು ಉತ್ತರ ನೀಡಿದಳು. ಇನ್ನು ನೀವು ಲೋಕಸಭೆ ಟಿವಿಯಲ್ಲಿ ಕೆಲಸ ಮಾಡುತ್ತೀರಿ. (ಲೋಕಸಭಾ ಟಿವಿ ಮೇ ನೌಕರಿ ಕರ್ತೇ ಹೋ) ಎಂದು ಆಹಾನಾ ಪ್ರಧಾನಿ ಅವರ ಪ್ರಶ್ನೆಗೆ ಮತ್ತೊಂದು ಉತ್ತರವನ್ನೂ ಹೇಳಿಯೇ ಬಿಟ್ಟಳು. ಬಾಲಕಿಯ ಈ ಮಾತು ಬರುತ್ತಿದ್ದಂತೆ ಪ್ರಧಾನಿಗಳ ಕೊಠಡಿಯಲ್ಲಿ ನಗೆಯ ಬುಗ್ಗೆಯೇ ಹರಿಯಿತು.

ಇಷ್ಟಾದ ಬಳಿಕ ಬಾಲಕಿಯ ಮುಗ್ದ ಉತ್ತರ ಕಂಡು ಖುಷಿಯಾದ ಪ್ರಧಾನಿ, ಸಂಸದರ ಪುತ್ರಿ ಆಹಾನಾಗೆ ಚಾಕೊಲೇಟ್​ ನೀಡಿ ಸಂತಸ ಇಮ್ಮಡಿಗೊಳಿಸಿದರು.

ಸಂಸದ ಫಿರೋಜಿಯಾ ಕತೆ ಇದು:ಮೊದಲ ಬಾರಿಗೆ ಆಯ್ಕೆ ಆಗಿರುವ ಸಂಸದ ಅನಿಲ್​ ಫಿರೋಜಿಯಾ ತೀರಾ ದಪ್ಪವಾಗಿದ್ದರು. ಈಗ ಅವರು ನಿತಿನ್​​ ಗಡ್ಕರಿ ಅವರ ಸಲಹೆಯಂತೆ ತೂಕ ಕಡಿಮೆ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ನೀವು ತೂಕ ಕಡಿಮೆ ಮಾಡಿಕೊಂಡರೆ, ಅಂದರೆ 1 ಕೆ.ಜಿ ತೂಕ ಇಳಿಕೆ ಆದರೆ 1 ಸಾವಿರ ಕೋಟಿ ಅನುದಾನ ನೀಡುವುದಾಗಿ ಗಡ್ಕರಿ ಹೇಳಿದ್ದರಂತೆ. ಈಗ ಫಿರೋಜಿಯಾ ಬರೋಬ್ಬರಿ 21 ಕೆ.ಜಿ ಭಾರ ಇಳಿಸಿಕೊಂಡಿದ್ದಾರೆ. ಹಾಗಾದರೆ ಸಂಸದರಿಗೆ 21 ಸಾವಿರ ಕೋಟಿ ಅನುದಾನ ಸಿಗುತ್ತಾ?

ಇದನ್ನು ಓದಿ:ಸೋರುತಿಹುದು ಶಾಲೆ ಮಾಳಿಗೆ.. ಛತ್ರಿ ಹಿಡಿದು ಪಾಠ ಕೇಳುವ ಸ್ಥಿತಿ! ವಿದ್ಯಾರ್ಥಿಗಳ ಗೋಳು ಕೇಳೊರ್ಯಾರು?

Last Updated : Jul 27, 2022, 10:09 PM IST

ABOUT THE AUTHOR

...view details