ಕರ್ನಾಟಕ

karnataka

ETV Bharat / bharat

ಕೊರೊನಾ ವೈರಸ್ ರೂಪಾಂತರದ ಬಗ್ಗೆ ಭಯ ಬೇಡ ಎಂದ ಔಷಧ ಕಂಪನಿಗಳು - ಕೋವಿಡ್​ ಲಸಿಕೆ

ಔಷಧ ಕಂಪನಿಗಳು ಕೊರೊನಾ ವೈರಸ್ ರೂಪಾಂತರದ ಬಗ್ಗೆ ಚಿಂತೆ ಬೇಡ ಎಂದರೂ ಜನರು ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ.

coronavirus mutations
ಕೊರೊನಾ ವೈರಸ್ ರೂಪಾಂತರ

By

Published : Dec 28, 2020, 5:09 PM IST

ಹೈದರಾಬಾದ್​:ಕೋವಿಡ್​ಗೆ ಲಸಿಕೆ ಅಭಿವೃದ್ಧಿಪಡಿಸಿರುವ ಮಾಡರ್ನಾ, ಫೈಝರ್/ಬಯೋಎನ್‌ಟೆಕ್, ಎಲಿ ಲಿಲ್ಲಿ​ ಸೇರಿದಂತೆ ಅನೇಕ ಔಷಧ ಕಂಪನಿಗಳು ತಮ್ಮ ಲಸಿಕೆಗಳು ಹಾಗೂ ಚಿಕಿತ್ಸೆಗಳು ಹೊಸ ತಳಿಯ ಕೋವಿಡ್ ವೈರಸ್ ವಿರುದ್ಧವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ಕೊರೊನಾ ವೈರಸ್ ರೂಪಾಂತರದ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿವೆ.

ಇಂಗ್ಲೆಂಡ್​ನಲ್ಲಿ ಹೊಸ ಪ್ರಭೇದದ ಕೋವಿಡ್ ವೈರಸ್ ಪತ್ತೆಯಾಗಿದ್ದು, ಕೆನಡಾ, ಜಪಾನ್‌ ಹಾಗೂ ಯುರೋಪಿಯನ್​ ದೇಶಗಳಲ್ಲಿ ಕೊರೊನಾ ರೂಪಾಂತರ ಪ್ರಕರಣಗಳು ವರದಿಯಾಗುತ್ತಿವೆ. ಹಿಂದಿನ ಕೊರೊನಾಗಿಂತಲೂ ಶೇ. 70ರಷ್ಟು ವೇಗವಾಗಿ ಈಗ ರೂಪಾಂತರಗೊಂಡಿರುವ ವೈರಸ್​​ ಹರಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೊರೊನಾ ಮಾತ್ರವಲ್ಲ ಯಾವುದೇ ವೈರಸ್​​ ಸ್ಥಿರವಾಗಿರುವುದಿಲ್ಲ, ವಿಕಸನಗೊಳ್ಳುತ್ತಿರುತ್ತವೆ ಎಂಬುದು ನಮಗೆ ತಿಳಿದಿದೆ. ಈ ಹಿಂದೆ ಹೊಸ ಪ್ರಭೇದದ ವೈರಸ್​​ಗಳು​ ಪತ್ತೆಯಾದಾಗ ನಮ್ಮ ಕಂಪನಿಯ ಪ್ರಯೋಗಾಲಯದ ಪರೀಕ್ಷೆಗಳ ಲಸಿಕೆಯು ಇನ್ನೂ ಪರಿಣಾಮಕಾರಿಯಾಗಿರಬೇಕು ಎಂಬುದನ್ನು ತೋರಿಸಿವೆ. ಇಂತಹ ಪರೀಕ್ಷೆಗಳನ್ನು ಇಂಗ್ಲೆಂಡ್​ನಲ್ಲಿ ರೂಪಾಂತರಗೊಂಡ ವೈರಸ್​​ ಜೊತೆ ನಡೆಸಲು ಯೋಜಿಸಿದ್ದೇವೆ. ಈ ಪ್ರಯೋಗಕ್ಕೆ ಎರಡು ವಾರಗಳ ಕಾಲಾವಧಿ ಬೇಕು. ಆದರೂ ಈಗ ತಯಾರಿಸಿರುವ ಲಸಿಕೆ ಹೊಸ ತಳಿಯ ವಿರುದ್ಧ ಹೋರಾಡಲಿದೆ ಎಂಬ ಭರವಸೆಯಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಬಲೆಯಲ್ಲಿ ವಿಶ್ವದ 8.1 ಕೋಟಿ ಮಂದಿ... ಯುರೋಪಿಯನ್​ ದೇಶಗಳಲ್ಲಿ 'ರೂಪಾಂತರ'

ಅಂತೆಯೇ ಅಮೆರಿಕದಲ್ಲಿ ತನ್ನ ಲಸಿಕೆಯನ್ನು ವಿತರಿಸಲು ಪ್ರಾರಂಭಿಸಿದ ಮಾಡರ್ನಾ, ನಮ್ಮ ಲಸಿಕೆ ಹೊಸ ಪ್ರಭೇದದ ವೈರಸ್​ನಿಂದ ರಕ್ಷಣೆ ನೀಡುತ್ತದೆ ಎಂದು ತಿಳಿಸಿದೆ. ಇನ್ನು ಕೋವಿಡ್-19 ಪ್ರತಿಕಾಯ ಸಿದ್ಧಪಡಿಸಿರುವ ಅಮೆರಿಕಾದ ಔಷಧೀಯ ಕಂಪನಿ ಎಲಿ ಲಿಲ್ಲಿ, ಈಗಾಗಲೇ ಬ್ರಿಟನ್​ನಲ್ಲಿ ಕಂಡುಬಂದಿರುವ ರೂಪಾಂತರಗೊಂಡ ವೈರಸ್​​ಅನ್ನು ಪರೀಕ್ಷಿಸಿದ್ದು, ತಾವು ತಯಾರಿಸಿರುವ 'ಬಮ್ಲಾನಿವಿಮಾಬ್' ಹೆಸರಿನ ಪ್ರತಿಕಾಯ ಇದರ ವಿರುದ್ಧ ಕಾರ್ಯನಿರ್ವಹಿಸಲಿದೆ ಎಂದಿದೆ.

ಔಷಧ ಕಂಪನಿಗಳು ಕೊರೊನಾ ವೈರಸ್ ರೂಪಾಂತರದ ಬಗ್ಗೆ ಚಿಂತೆ ಬೇಡ ಎಂದರೂ ಜನರು ಕೋವಿಡ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯವಾಗಿದೆ.

ABOUT THE AUTHOR

...view details