ಅರಿಯಲೂರು (ತಮಿಳುನಾಡು): 2021ರ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖಂಡ ಕನಿಮೋಳಿ ಕರುಣಾನಿಧಿ ಅರಿಯಲೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಅರಿಯಲೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಕಣಿಮೊಝಿ ಕರುಣಾನಿಧಿ ಅರಿಯಲೂರಿನಲ್ಲಿ ಮಾರ್ಚ್ 24ರಂದು ನಡೆದ ರೋಡ್ ಶೋನಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ಕೊರೊನಾ ನಿಯಮಾವಳಿ ಹಾಗೂ ಸಾಮಾಜಿಕ ಅಂತರ ಗಾಳಿಗೆ ತೂರಲಾಗಿತ್ತು.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಕಾಂಗ್ರೆಸ್-ಡಿಎಂಕೆ ಮತ್ತು ಬಿಜೆಪಿ-ಎಐಎಡಿಎಂಕೆ ಮೈತ್ರಿ ಕೂಟಗಳು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸುತ್ತಿವೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.
ಓದಿ:ವಾರಾಣಸಿಯಲ್ಲಿ ‘ರಂಗ್ಭರಿ ಏಕಾದಶಿ’: ಇದು ಹೋಳಿಯ ಪ್ರಾರಂಭದ ಸಂಕೇತ